ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಅ.4ರಂದು ನಡೆಯುವ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಪ್ರಮುಖ ಆಕರ್ಷಣೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ. ಕಳೆದ ವರ್ಷದಂತೆ ಈ ವರ್ಷವೂ ಮಹೇಂದ್ರ ಆನೆಯು 400 ಕೆ.ಜಿ. ತೂಕದ ಮರದ ಅಂಬಾರಿ ಸೇರಿ ಒಟ್ಟು 650 ಕೆ.ಜಿ. ತೂಕದ ಸರ್ವಾಲಂಕೃತ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗಲಿದೆ.

ಈ ಬಾರಿ ಪಟ್ಟಣದಲ್ಲಿ ಶುಕ್ರವಾರ (ಅ.4) ಮಧ್ಯಾಹ್ನ ನಡೆಯುವ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಮೂರು ಆನೆಗಳು ಪಾಲ್ಗೊಳ್ಳಲಿವೆ. ಮಹೇಂದ್ರ, ಹಿರಣ್ಯ ಮತ್ತು ಲಕ್ಷ್ಮಿ ಹೆಸರಿನ ಆನೆಗಳು ಗುರುವಾರ ಸಂಜೆ ಮೈಸೂರಿನಿಂದ ಇಲ್ಲಿಗೆ ಬರಲಿವೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿರುವ ಪಂಚ ಲೋಹದ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಮರದ ಅಂಬಾರಿಯಲ್ಲಿ ಇಟ್ಟು ಆನೆಯ ಮೇಲೆ ಮೆರವಣಿಗೆ ಮಾಡಲಾಗುತ್ತಿದೆ. ಚಾಮುಂಡೇಶ್ವರಿ ದೇವಿಯ ಈ ವಿಗ್ರಹ 250 ಕೆ.ಜಿ. ತೂಕವಿದೆ. ಮೂರೂವರೆ ಅಡಿ ಎತ್ತರದ ದೇವಿಯು ಅಷ್ಟಭುಜೆಯಾಗಿದ್ದು ಖಡ್ಗ, ಶಂಖ, ಚಕ್ರ, ಅಭಯ ಹಸ್ತ, ಪುಷ್ಪ ಬಾಣ, ಗದೆ ಮತ್ತು ತ್ರಿಶೂಲ ಧಾರಣಿಯಾಗಿದ್ದಾಳೆ. ಹಸನ್ಮುಖಿ ದೇವಿಯು ಸಿಂಹದ ಮೇಲೆ ಕಳಿತಿರುವ ಭಂಗಿಯಲ್ಲಿರುವ ಈ ವಿಗ್ರಹವನ್ನು ಶಿಲ್ಪಿಯು ಚಿತ್ತಾಕರ್ಷಕವಾಗಿ ತಯಾರಿಸಿದ್ದಾನೆ. ದೇವಿಯು ನೋಡಿದ ಕೂಡಲೇ ಭಕ್ತಿ ಹುಟ್ಟಿವಂತೆ ಪ್ರಸನ್ನ ವದನೆಯಾಗಿದ್ದಾಳೆ.

ಅರಮನೆಯ ಮರದ ಅಂಬಾರಿ: ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಕೂರಿಸುವ, ರಾಜ ಲಾಂಛನವುಳ್ಳ ಮರದ ಅಂಬಾರಿಯನ್ನು ಪ್ರತಿ ವರ್ಷ ಮೈಸೂರು ಅರಮನೆಯಿಂದ ತರಲಾಗುತ್ತದೆ. ತೇಗದ ಮರದಿಂದ ರಾಜ ಮನೆತನದವರು ಈ ಅಂಬಾರಿಯನ್ನು ಮಾಡಿಸಿದ್ದು, ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿಯ ತಾಲೀಮಿನಲ್ಲಿ ಇದೇ ಅಂಬಾರಿಯನ್ನು ಬಳಸಲಾಗುತ್ತದೆ. ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವದ ಹಿಂದಿನ ದಿನ ಅಂಬಾರಿಯನ್ನು ಮೈಸೂರಿನಿಂದ ತಂದು ಉತ್ಸವ ಮುಗಿದ ನಂತರ ಅರಮನೆಗೆ ಮರಳಿಸಲಾಗುತ್ತದೆ.

ಬನ್ನಿ ಮಂಟಪದಲ್ಲಿ ಪೂಜೆ: ‘ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಆನೆಯ ಮೇಲೆ ಪ್ರತಿಷ್ಠಾಪಿಸುವ ಮುನ್ನ ಕಿರಂಗೂರು ಬಳಿಯ ಬನ್ನಿ ಮಂಟಪದಲ್ಲಿಟ್ಟು ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗುತ್ತದೆ. ಗಣಪತಿ ಪೂಜೆ, ಪುಣ್ಯಾಹ ವಾಚನ, ಗಂಗಾ– ಭಾಗೀರತಿ ಪೂಜೆ, ಶೋಡಷೋ ಪಚಾರ, ಬನ್ನಿ ವೃಕ್ಷ ಪೂಜೆ, ನಂದಿ ಧ್ವಜ ಪೂಜೆ; ಗಜ, ಅಶ್ವಪೂಜೆ ಮತ್ತು ಅಷ್ಟ ದಿಕ್ಪಾಲಕ ಬಲಿ ಕೈಂಕರ್ಯಗಳು ನಡೆಯುತ್ತವೆ. ಮಂಗಳಾಷ್ಟಕ ಫೂಜೆಯ ನಂತರ ಜಂಬೂ ಸವಾರಿಗೆ ಚಾಲನೆ ನೀಡಲಾಗುತ್ತದೆ’ ಎಂಬುದು ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್. ಲಕ್ಷ್ಮೀಶ ಶರ್ಮಾ ಅವರ ವಿವರಣೆ.

ಕುಂಭಕೋಣಂನಿಂದ ಬಂದ ವಿಗ್ರಹ

ಶ್ರೀರಂಗಪಟ್ಟಣದಲ್ಲಿ 2008ರಲ್ಲಿ ದಸರಾ ಉತ್ಸವ ಪುನರಾರಂಭವಾಗಿದ್ದು ಪ್ರತಿ ವರ್ಷ ದಸರಾದಲ್ಲಿ ಇದೇ ವಿಗ್ರಹವನ್ನೇ ಮೆರವಣಿಗೆ ಮಾಡಲಾಗುತ್ತಿದೆ. ಚಾಮುಂಡೇಶ್ವರಿ ದೇವಿಯ ಭಕ್ತರಾದ ಪಟ್ಟಣದ ತುಳಸಿ ಮನೆ ಸುರೇಶ್ ಎಂಬವರು ₹3 ಲಕ್ಷ ವೆಚ್ಚದಲ್ಲಿ ಈ ಪಂಚಲೋಹದ ವಿಗ್ರಹವನ್ನು ಮಾಡಿಸಿಕೊಟ್ಟಿದ್ದಾರೆ. ತಮಿಳುನಾಡಿನ ಕುಂಭಕೋಣಂನ ಶಿಲ್ಪಿಯೊಬ್ಬರು ಇದನ್ನು ತಯಾರಿಸಿಕೊಟ್ಟಿದ್ದಾರೆ. ಈ ವಿಗ್ರಹವನ್ನು ದಸರಾ ಉತ್ಸವ ಮಾತ್ರವಲ್ಲದೆ ಇಲ್ಲಿ ನಡೆಯುವ ವಿಜಯ ದಶಮಿ ಉತ್ಸವ ಯುಗಾದಿ ಮತ್ತು ಚಾಮುಂಡೇಶ್ವರಿ ವರ್ಧಂತಿಯ ದಿನ ಕೂಡ ಮೆರವಣಿಗೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.