ಅರ್ಜುನ್ ಜನ್ಯಾ, ವಿಜಯಪ್ರಕಾಶ್ ತಂಡದಿಂದ ‘ರಸಸಂಜೆ’ ವಿವಿಧ ಚಿತ್ರಮಂದಿರಗಳಲ್ಲಿ ‘ಸಿನಿಮೋತ್ಸವ’ ಸಾಂಸ್ಕೃತಿಕ ಕಾರ್ಯಕ್ರಗಳ ರಸದೌತಣ
ಅ.5ರಂದು ಸಂಗೀತ ‘ರಸಸಂಜೆ’
ಅ.5ರಂದು ಬೆಳಿಗ್ಗೆ 7ಕ್ಕೆ ಕರಿಘಟ್ಟ ದೇವಸ್ಥಾನದ ಪಾದದಿಂದ ದೇವಸ್ಥಾನದ ಮೇಲ್ಭಾಗದವರೆಗೆ ಬೆಟ್ಟ ಹತ್ತುವ ಸ್ಪರ್ಧೆ (ಚಾರಣ) ಏರ್ಪಡಿಸಲಾಗಿದೆ. ಬೆಳಿಗ್ಗೆ 10ರಿಂದ 12.30 ರವರೆಗೆ ಗಂಜಾಂನ ಶ್ರೀದೇವಿ ಚಿತ್ರಮಂದಿರ ಬಾಬುರಾಯನ ಕೊಪ್ಪಲಿನ ಭಾರತಿ ಚಿತ್ರಮಂದಿರ ಹಾಗೂ ಅರಕೆರೆಯ ಮಂಜುನಾಥ್ ಚಿತ್ರಮಂದಿರಗಳಲ್ಲಿ ‘ಸಿನಿಮೋತ್ಸವ’ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಶ್ರೀರಂಗ ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಸ್ಥಳೀಯ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 7ಕ್ಕೆ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
ಅ.7ರಂದು ಕುಸ್ತಿ ಪಂದ್ಯ
ಅ.7ರಂದು ಬೆಳಿಗ್ಗೆ 10 ಗಂಟೆಯಿಂದ 12.30 ಗಂಟೆಯವರೆಗೆ ಗಂಜಾಂನ ಶ್ರೀದೇವಿ ಚಿತ್ರಮಂದಿರ ಬಾಬುರಾಯನ ಕೊಪ್ಪಲಿನ ಭಾರತಿ ಚಿತ್ರಮಂದಿರ ಹಾಗೂ ಅರಕೆರೆಯ ಮಂಜುನಾಥ್ ಚಿತ್ರಮಂದಿರಗಳಲ್ಲಿ ಸಿನಿಮೋತ್ಸವ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದ ಶ್ರೀರಂಗ ವೇದಿಕೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಗಾಯಕರು ಹಾಗೂ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಮತ್ತು ತಂಡದಿಂದ ‘ಸಂಗೀತ ರಸಸಂಜೆ’ ಕಾರ್ಯಕ್ರಮ ನಡೆಯಲಿದೆ.