ಮಂಡ್ಯ: ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿರುವುದರಿಂದ, ಮೈಸೂರು ಜಿಲ್ಲಾ ವ್ಯಾಪ್ತಿಯ ಬೋರೆ ಆನಂದೂರು ಹಿನ್ನೀರು ಪ್ರದೇಶದಲ್ಲಿ ಮುಳುಗಿದ್ದ ನಾರಾಯಣಸ್ವಾಮಿ ದೇವಾಲಯ ಗೋಚರಿಸುತ್ತಿದೆ.

ಮಳೆ ಕೊರತೆಯಿಂದಾಗಿ ಸದ್ಯ ಜಲಾಶಯದ ನೀರಿನ ಮಟ್ಟ 92.40 ಅಡಿಗೆ ಕುಸಿದಿದೆ. ಜಲಾಶಯಕ್ಕೆ ಕೇವಲ 350 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ನೀಡಿರುವುದರಿಂದ 1,002 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ದೇವಾಲಯದ ಮೂರ್ತಿಯನ್ನು ಹೊರಗೆ ತಂದು ಮಜ್ಜಿಗೆಪುರ ಗ್ರಾಮದಲ್ಲಿ ಪ್ರತ್ಯೇಕ ದೇವಾಲಯ ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ. ಸದ್ಯ ಹಿನ್ನೀರಿನಲ್ಲಿ ದೇವಾಲಯದ ಅವಶೇಷಗಳಿವೆ.

‘2022ರಲ್ಲೂ ದೇವಾಲಯ ಗೋಚರಿಸಿತ್ತು, ಈಗ ಮತ್ತೆ ಕಾಣಿಸುತ್ತಿದ್ದು ಮೇ ತಿಂಗಳವರೆಗೂ ಕುಡಿಯುವ ನೀರು ಸಿಗುವುದು ಅನುಮಾನ. ಬೆಳೆದು ನಿಂತಿರುವ ಲಕ್ಷಾಂತರ ಎಕರೆ ಬೆಳೆ ನಾಶವಾಗುವುದು ನಿಶ್ಚಿತ. ಜನ, ಜಾನುವಾರುಗಳನ್ನು ಕಾಪಾಡುವವರು ಯಾರು’ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡ ಕೆ.ಬೋರಯ್ಯ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.