ಮೇಲುಕೋಟೆ: ಇಲ್ಲಿನ ಚೆಲುವ ನಾರಾಯಣ ಸ್ವಾಮಿಗೆ ಕೃಷ್ಣರಾಜಮುಡಿ ಕಿರೀಟ ಧಾರಣಾ ಮಹೋತ್ಸವ ಶುಕ್ರವಾರ ರಾತ್ರಿ ಮೇಲುಕೋಟೆಯಲ್ಲಿ ವೈಭವದಿಂದ ನೆರವೇರಿತು.

ಮೈಸೂರು ಅರಸ ಮುಮ್ಮಡಿ ಕೃಷ್ಣರಾಜ ಒಡೆಯರ್ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಕೆಂಪು, ಬಿಳಿ ವಜ್ರದ ಪಚ್ಚೆಮಣಿಯ ಸಿಂಹಲಾಂಛನವುಳ್ಳ ವಜ್ರಖಚಿತ ಕಿರೀಟ ಹಾಗೂ ಗಂಡಭೇರುಂಡ ಪದಕ ಸೇರಿದಂತೆ ವಿವಿಧ ರೀತಿಯ ಆಭರಣಗಳನ್ನು ಶ್ರೀದೇವಿ ಮತ್ತು ಭೂದೇವಿಯರೊಂದಿಗೆ ಗರುಡಾರೂಢನಾಗಿ ಅಲಂಕೃತನಾದ ಚೆಲುವರಾಯಸ್ವಾಮಿಗೆ ತೊಡಿಸಿದ ನಂತರ ಮಹಾಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಪುಷ್ಪಾಹಾರಗಳಿಂದ ಅಲಂಕೃತನಾಗಿದ್ದ ಚೆಲುವನಾರಾಯಣಸ್ವಾಮಿಯ ಉತ್ಸವ ಮೇಲುಕೋಟೆಯ ರಾಜಬೀದಿಗಳಲ್ಲಿ ವೈಭವಯುತವಾಗಿ ನೆರವೇರಿತು. ನೂರಾರು ಭಕ್ತರು ಉತ್ಸವ ಬರುವ ದಾರಿಯುದ್ದಕ್ಕೂ ರಂಗೋಲಿ ಹಾಕಿ ಸ್ವಾಮಿಯ ಉತ್ಸವ ಸ್ವಾಗತಿಸಿ ಕೃಷ್ಣರಾಜಮುಡಿ ಕಿರೀಟಧಿ ಚೆಲುವ ನಾರಾಯಣ ಸ್ವಾಮಿಯ ದರ್ಶನ ಮಾಡಿ ಪುನೀತರಾದರು.

ಪಾರ್ಕವಾಣೆ : ಇದಕ್ಕೂ ಮೊದಲು ಮಂಡ್ಯ ಜಿಲ್ಲಾ ಖಜಾನೆಯಿಂದ ಪೊಲೀಸ್ ಭದ್ರತೆಯಲ್ಲಿ ತರಲಾದ ಕೃಷ್ಣರಾಜಮುಡಿ ಕಿರೀಟವನ್ನು ದೇವಾಲಯದ ಸನ್ನಿಧಿಯಲ್ಲಿ ಸ್ಥಾನೀಕರು, ಅರ್ಚಕರು, ಮತ್ತು ಪರಿಚಾರಕರು ಅಧಿಕಾರಿಗಳ ಸಮಕ್ಷಮದಲ್ಲಿ ಪರಿಶೀಲಿಸಲಾಯಿತು. ತುಂತುರು ಮಳೆಯ ಸಿಂಚನದ ನಡುವೆಯೂ ಪಲ್ಲಕ್ಕಿಯಲ್ಲಿರಿಸಿ ಮಂಗಳವಾದ್ಯದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ದೇವಾಲಯಕ್ಕೆ ತರಲಾಯಿತು.

ಉಪವಿಭಾಗಧಿಕಾರಿ ನಂದೀಶ್, ದೇವಾಲಯ ಕಾರ್ಯನಿರ್ವಾಹಕಾಧಿರಿ ಮಹೇಶ್ ಸರ್ಕಲ್ ಇನ್ಸ್ಪೆಕ್ಟರ್ ಸಿದ್ದಪ್ಪ ಪಾಲ್ಗೊಂಡಿದರು.

ಕಿರೀಟಧಾರಣೆ ಸ್ಥಳ ಬದಲಾವಣೆ:

ಪ್ರತಿ ವರ್ಷವೂ ಇಲ್ಲಿನ ವೇದಾಂತ ದೇಶಿಕರ ಸನ್ನಿಧಿಯಲ್ಲಿ ಕಿರೀಟಧಾರಣೆ ಮಹೋತ್ಸವ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತಿತ್ತು. ದೇಶಿಕರ ಸನ್ನಿಧಿ ಮಳೆಯಿಂದ ಸೋರುತ್ತಿದ್ದ ಹಿನ್ನೆಲೆಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಗದೆ ಉಪವಿಭಾಗಧಿಕಾರಿ ನಂದೀಶ್ ಅವರ ಆದೇಶದ ಹಿನ್ನೆಲೆಯಲ್ಲಿ ಚೆಲುವ ನಾರಾಯಣ ದೇವಾಲಯದಲ್ಲೇ ಕಿರೀಟಧಾರಣೆ ಮಹೋತ್ಸವ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.