ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಬಿರುಗಾಳಿಗೆ ಹಾರಿ ಹೋದ ಮನೆಯ ಚಾವಣಿ

Published 3 ಮೇ 2024, 14:04 IST
Last Updated 3 ಮೇ 2024, 14:04 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ಪಟ್ಟಣದ ರಂಗನಾಥನಗರ ಬಡಾವಣೆಯಲ್ಲಿ ಮನೆಯೊಂದರ ಚಾವಣಿ ಸಂಪೂರ್ಣ ಹಾರಿ ಹೋಗಿದೆ.

ನ್ಯಾಯಾಲಯದ ಹಿಂಭಾಗ, ರಂಗನಾಥನಗರ ವ್ಯಾಪ್ತಿಯಲ್ಲಿ ಬರುವ ಮಹಾದೇವಿ ಎಂಬವರ ಮನೆಯ ಕಲ್ನಾರ್‌ ಸೀಟುಗಳು ಹಾರಿ ಹೋಗಿವೆ. ಕೆಲವು ಸೀಟುಗಳು ಅರ್ಧಕ್ಕೆ ಮುರಿದು ಬಿದ್ದಿವೆ. ಕಲ್ನಾರ್‌ ಸೀಟುಗಳ ಚೂರುಗಳು ಮನೆಯ ಒಳಗಕ್ಕೂ ಬಿದ್ದಿದ್ದು, ಪಾತ್ರೆ, ಬಟ್ಟೆ, ಧವಸ– ಧಾನ್ಯಗಳು ಭಾಗಶಃ ಹಾನಿಗೀಡಾಗಿವೆ. ಸೀಟುಗಳು ಹಾರಿ ಹೋದ ಸಂದರ್ಭದಲ್ಲಿ ಮನೆಯಲ್ಲಿಯೇ ಇದ್ದ ಮಹಾದೇವಿ ಅಪಾಯದಿಂದ ಪಾರಾಗಿದ್ದಾರೆ.

ಭಾರಿ ಬಿರುಗಾಳಿಗೆ ಪಟ್ಟಣದಾದ್ಯಂತ ವ್ಯಾಪಕವಾಗಿ ಧೂಳು ಆವರಿಸಿತ್ತು. ಪಾದಚಾರಿಗಳು ಅವಿತುಕೊಳ್ಳುವಂತಾಗಿತ್ತು. ವಾಹನ ಸವಾರರು ಕೂಡ ಗಾಳಿಯ ರಭಸಕ್ಕೆ ಪರದಾಡಿದರು. ಅಲ್ಲಲ್ಲಿ ರೆಂಬೆ, ಕೊಂಬೆಗಳು ಮುರಿದಿವೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಅರಕೆರೆ, ಆಲಗೂಡು, ಕೆ.ಶೆಟ್ಟಹಳ್ಳಿ, ಗಣಂಗೂರು, ಬಾಬುರಾಯನಕೊಪ್ಪಲು, ಮರಳಾಗಾಲ ಇತರೆಡೆ ಗಾಳಿ ಸಹಿತ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT