ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಶ್ರೀರಾಮ ಮಂದಿರ, ಚಿಕ್ಕಮ್ಮ ದೇವಸ್ಥಾನದಲ್ಲಿ ಕಳ್ಳತನ

mnd
Published 26 ಜುಲೈ 2024, 14:38 IST
Last Updated 26 ಜುಲೈ 2024, 14:38 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ಕೆರಗೋಡು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಮುಂದುವರಿದಿದ್ದು, ಗುರುವಾರ ತಡರಾತ್ರಿ ಮರಿಲಿಂಗನದೊಡ್ಡಿ ಗ್ರಾಮದ ಶ್ರೀರಾಮ ಮಂದಿರ ಮತ್ತು ಚಿಕ್ಕಮ್ಮ ದೇವಸ್ಥಾನದಲ್ಲಿ ಬಾಗಿಲು ಮುರಿದು ಹುಂಡಿ ಹಣ ಕಳ್ಳತನ ಮಾಡಿರುವ ಪ್ರಕರಣ ನಡೆದಿದೆ.

ಚಿಕ್ಕಮ್ಮ ದೇವಾಲಯದಲ್ಲಿ ದೇವರ ಸೀರೆಗಳನ್ನು ಕದ್ದೋಯ್ದಿರುವ ಕಳ್ಳರು, ಶ್ರೀರಾಮ ಮಂದಿರದ ಒಂದರಲ್ಲಿಯೇ ಹುಂಡಿ ಹಣವು ಸುಮಾರು ₹60 ಸಾವಿರ ಕಳ್ಳತನವಾಗಿದೆ ಎಂದು ಶ್ರೀರಾಮ ಮಂದಿರ ಟ್ರಸ್ಟ್‌ ಚೇತನ್‌ ಮತ್ತು ಮುಖಂಡ ಶಿವಪ್ರಸಾದ್‌ ಅವರು ಮಾಹಿತಿ ನೀಡಿದರು.

ಕಳೆದ ಆರು ತಿಂಗಳಲ್ಲಿ ಒಂದೇ ಗ್ರಾಮದ ಪಂಪ್‌ಸೆಟ್‌ಗಳಲ್ಲಿನ ತಾಮ್ರದ ವೈರ್‌ ಕಳವು, ಕಬ್ಬಿಣದ ಅಂಗಡಿಗಳು, ಪೇಯಿಂಟ್‌ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಘಟನೆ ನಡೆದಿರುವುದರಿಂದ ಗ್ರಾಮಸ್ಥರಾದ ಶಿವು, ಚೇತನ್‌, ಆನಂದ್‌ ಅವರು ಆತಂಕ ವ್ಯಕ್ತಡಿಸಿದರು.

ಮರಲಿಂಗನದೊಡ್ಡಿ ಗ್ರಾಮವು ಕೆರಗೋಡು ಪೊಲೀಸ್‌ ಠಾಣೆಯಿಂದ ಕೇವಲ 3 ಕಿ.ಮೀ. ದೂರದಲ್ಲಿದ್ದು, ಗ್ರಾಮದಲ್ಲಿ ಸರಣಿ ಕಳ್ಳತನವಾಗುತ್ತಿರುವುದರಿಂದ ಅಕ್ಕಪಕ್ಕದ ಗ್ರಾಮಸ್ಥರಲ್ಲಿಯೂ ಭಯ ಆವರಿಸಿದೆ. ತಕ್ಷಣ ಪೊಲೀಸರು ಕಾರ್ಯೋನ್ಮುಖರಾಗಿ ಕಳ್ಳತನ ತಪ್ಪಿಸಬೇಕು ಎಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

ಈ ಸಂಬಂಧ ಕೆರಗೋಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

..........

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT