ಕೆ.ಆರ್.ಪೇಟೆ: ದಲಿತರು ಸೇರಿದಂತೆ ಎಲ್ಲಾ ವರ್ಗದ ಮತದಾರರು ಯಡಿಯೂರಪ್ಪ ಅವರ ಸರ್ಕಾರವನ್ನು ಮೆಚ್ಚಿದ್ದಾರೆ. ಈ ಉಪಚುನಾವಣೆಯ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆ.ಆರ್.ಪೇಟೆಯ ಪ್ರಬುದ್ಧ ಮತದಾರರು ಬದಲಾವಣೆ ಬಯಸಿ ದ್ದಾರೆ. ನಾರಾಯಣಗೌಡ ಅವರನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪ ಅವರಿಗೆ ತವರಿನ ಉಡುಗೊರೆಯನ್ನು ನೀಡಲಿದ್ದಾರೆ’ ಎಂದರು.

ಈ ಹಿಂದೆ ದೇಶದ ಪ್ರಧಾನಿ ಯಾಗಿದ್ದವರು ಲೋಕಸಭಾ ಚುನಾವಣೆ ಯಲ್ಲಿ ತಮ್ಮ ಇಬ್ಬರು ಮೊಮ್ಮಕ್ಕಳಿಗೆ ರಾಜಕೀಯ ನೆಲೆ ಕಲ್ಪಿಸಲು ಹೋಗಿ ತಾವೇ ಮತದಾರ ರಿಂದ ಛೀಮಾರಿಗೆ ಒಳಗಾಗಿದ್ದರು. ಈ ಬಾರಿ ದ್ವಂದ್ವ ಹೇಳಿಕೆ ನೀಡುವ ಮೂಲಕ ಕೆ.ಆರ್.ಪೇಟೆ ಸೇರಿದಂತೆ ಉಪಚುನಾವಣೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳ ಮತದಾರರಿಂದ ತಿರಸ್ಕೃತರಾಗಲಿದ್ದಾರೆ’ ಎಂದು ಹರಿಹಾಯ್ದರು.

ಸಿದ್ದರಾಮಯ್ಯನಂತಹ ವಿವೇಚನೆ ಇಲ್ಲದ ರಾಜಕಾರಣಿ ಇನ್ನೊಬ್ಬರಿಲ್ಲ. ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದೇ ಇದಕ್ಕೆ ನಿದರ್ಶನ. ಕಂದಾಯ ಸಚಿವರಾಗಿದ್ದ ನನಗೆ ಒಂದು ಮಾತು ಹೇಳದೆ ಸಂಪುಟವನ್ನು ಪುನರ್ ರಚಿಸಿದರು. ಪುನರ್ ರಚಿಸುವುದು ಮುಖ್ಯಮಂತ್ರಿ ಜವಾಬ್ದಾರಿ. ಆದರೆ, ತನ್ನ ಸಂಪುಟದ ಸಚಿವನೊಂದಿಗೆ ಮಾತನಾಡಬೇಕೆಂಬ ಸಾಮಾನ್ಯ ತಿಳಿವಳಿಕೆ ಅವರಿಗಿಲ್ಲ. ದೇವೇಗೌಡ ಮತ್ತು ಸಿದ್ದರಾಮಯ್ಯ ಒಂದು ನಾಣ್ಯದ ಎರಡು ಮುಖವಿದ್ದಂತೆ ಎಂದರು.

ಮಾಜಿ ಸಚಿವ ಕೋಟೆ ಶಿವಣ್ಣ, ಮೈಸೂರು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ, ಮುಖಂಡರಾದ ಎಸ್.ಸಿ.ಆಶೋಕ್, ನಾಗರಾಜಪ್ಪ, ಯಮದೂರು ಸಿದ್ದರಾಜು, ಕೆಂಪ ಬೋರಯ್ಯ, ನಾರ್ಗೋನಹಳ್ಳಿ ಕುಮಾರ್, ಬೂಕನಕೆರೆ ಮಧುಸೂದನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.