ಮದ್ದೂರು: ಇಲ್ಲಿಯ ಇತಿಹಾಸ ಪ್ರಸಿದ್ಧ ಮದ್ದೂರಮ್ಮ ದೇಗುಲದ ಬಳಿ ಪುರಸಭೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ಸೂಕ್ತ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ.

ದೇಗುಲಕ್ಕೆ ನಿತ್ಯವೂ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಇವರಿಗೆ ಅನುಕೂಲವಾಗಲಿ ಎಂದ ದೃಷ್ಟಿಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಒಂದು ವರ್ಷದ ಹಿಂದೆ ಈ ಶೌಚಾಲಯ ನಿರ್ಮಿಸಲಾಯಿತು. ಆದರೆ ನಿರ್ವಹಣಾ ಕಾಮಗಾರಿ ಸಮರ್ಪಕವಾಗಿ ಆಗಲಿಲ್ಲ. ಆರಂಭಗೊಂಡ ಕೆಲವೇ ತಿಂಗಳಲ್ಲಿ ಶೌಚಾಲಯಗಳ ಮಲ– ನೀರು ಸಂಗ್ರಹ ಗುಂಡಿ ತುಂಬಿ ಹೋದ ಕಾರಣ ಶೌಚಾಲಯದ ಆವರಣದಲ್ಲಿ ಕೊಳಕು ನೀರು ಹರಿದು ನಿಲ್ಲಲಾರಂಭಿಸಿತು. ಇದರಿಂದ ಬೇಸರಗೊಂಡ ಪೌರಕಾರ್ಮಿಕರು ಶೌಚಾಲಯಕ್ಕೆ ಬೀಗ ಹಾಕಿದರು.

‘ದೇವಸ್ಥಾನದಲ್ಲಿ ಆವರಣದಲ್ಲಿ ಪ್ರತಿ ಮಂಗಳವಾರ ಮತ್ತು ಭಾನುವಾರ ವಿಶೇಷ ಪೂಜೆ ನಡೆಯುತ್ತದೆ. ಆ ಸಂದರ್ಭದಲ್ಲಿ ಭಕ್ತರು ಇಲ್ಲಿಯೇ ಬಾಡೂಟ ಸಿದ್ಧಪಡಿಸಿ, ನೂರಾರು ಭಕ್ತರಿಗೆ ಉಣಬಡಿಸುತ್ತಾರೆ. ಈ ವೇಳೆ ಇಲ್ಲಿಗೆ ಬರುವ ಮಹಿಳೆಯರು, ವೃದ್ಧರು, ಮಕ್ಕಳು ಶೌಚಗೃಹಕ್ಕೆ ಹೋಗಬೇಕಾದರೆ ಇಲ್ಲಿಗೇ ಬರಬೇಕಿದೆ. ಆದರೆ ಈಗ ಈ ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಬಯಲು ಶೌಚಾಲಯವನ್ನೇ ಅವಲಂಬಿಸಬೇಕಿದೆ’ ಎನ್ನುತ್ತಾರೆ ಮದ್ದೂರಮ್ಮ ದೇಗುಲ ಯುವಕರ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಯಶವಂತ್.

ಬಯಲು ಶೌಚಾಲಯ ಮುಕ್ತ ಗುರಿ ಸಾಧನೆಗಾಗಿ ಪಟ್ಟಣದ ಜನರಿಗೆ ಶೌಚಾಲಯ ನಿರ್ಮಾ ಣದ ಮಹತ್ವ ತಿಳಿಸುವ ಪುರಸಭೆ ಅಧಿಕಾರಿಗಳು ಸಿಬ್ಬಂದಿ ಕೊರತೆ ನೆಪವೊಡ್ಡಿ ಸಾರ್ವಜನಿಕ ಶೌಚಾ ಲಯಕ್ಕೆ ಬೀಗ ಹಾಕಿರುವುದು ವ್ಯವಸ್ಥೆಯ ಅಣಕವಾಗಿದೆ. ಕೂಡಲೇ ಮುಖ್ಯಾಧಿಕಾರಿ ಈ ಶೌಚಾಲಯವನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯ ಪಾಳು ಬಿದ್ದಿದೆ. ಕೂಡಲೇ ಇದರ ಬಳಕೆಗೆ ಕ್ರಮ ಕೈಗೊಳ್ಳಬೇಕು
- ಎಂ.ಯಶವಂತ್, ಅಧ್ಯಕ್ಷ, ಮದ್ದೂರಮ್ಮ ದೇಗುಲ ಯುವಕರ ಸೇವಾ ಟ್ರಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.