ಪಿರಿಯಾಪಟ್ಟಣ (ಮೈಸೂರು): ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಶುಕ್ರವಾರ ಕೊಲೆ ಮಾಡಿದ್ದು, ನಂತರ ಪೊಲೀಸರಿಗೆ ಶರಣಾಗಿದ್ದಾನೆ.

ಪಟ್ಟಣದ ಜಯರಾಮ್ ಆರೋಪಿ. ಗಾಯತ್ರಿ (19), ಮೃತಪಟ್ಟ ಯುವತಿ.

ಸುಮಾರು ಒಂದು ತಿಂಗಳಿನಿಂದಲೂ, ಮಗಳ ಪ್ರೀತಿಯ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಶುಕ್ರವಾರ ಮಧ್ಯಾಹ್ನ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಗಾಯತ್ರಿ ಊಟವನ್ನು ತಂದಿದ್ದಾಳೆ. ಈ ವೇಳೆ, ಬೇರೆ ಜಾತಿಯ ಯುವಕನನ್ನು ಪ್ರೀತಿಸುವುದು ಬೇಡ ಎಂದು ಜಯರಾಮ್ ಹೇಳಿದ್ದಾನೆ.

ಈ ಮಾತಿಗೆ ಒಪ್ಪದ ಗಾಯತ್ರಿ, ತಂದೆಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಜೊತೆಗೆ, ’ಪ್ರೀತಿಸುವುದನ್ನು ಮುಂದುವರಿಸಿದರೆ ಏನು ಮಾಡುತ್ತೀಯ?’ ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಜಯರಾಮ್, ಪಕ್ಕದಲ್ಲೇ ಇದ್ದ ಮಚ್ಚನ್ನು ತೆಗೆದು ಮಗಳತ್ತ ಬೀಸಿದ್ದಾನೆ. ಏಟಿನಿಂದ ತಪ್ಪಿಸಿಕೊಳ್ಳಲು, ಆಕೆ ಅಡ್ಡವಾಗಿ ಕೈಯನ್ನು ಹಿಡಿದುಕೊಂಡರೂ, ಮಚ್ಚು ಕುತ್ತಿಗೆಯನ್ನು ಸೀಳಿದೆ.

ಸ್ಥಳದಲ್ಲೇ ಮೃತಪಟ್ಟ ಮಗಳನ್ನು ಕಂಡು ದಿಗ್ಭ್ರಾಂತನಾದ ಜಯರಾಮ್, ನೇರ ಪೊಲೀಸ್ ಠಾಣೆಗೆ ಬಂದು ಸಿಟ್ಟಿನ ಭರದಲ್ಲಿ ಆದ ಅನಾಹುತವನ್ನು ವಿವರಿಸಿ, ಶರಣಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕೃತ್ಯ ನಡೆದ ಸ್ಥಳಕ್ಕೆ ಡಿವೈಎಸ್‌ಪಿ ರವಿಪ್ರಸಾದ್, ಇನ್‌ಸ್ಪೆಕ್ಟರ್‌ಗಳಾದ ಜಗದೀಶ್, ಬಿ.ಆರ್.ಪ್ರದೀಪ್, ಪಿಎಸ್ಐ ಸದಾಶಿವತಿಪರೆಡ್ಡಿ, ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.