ಗೋಣಿಕೊಪ್ಪಲು: ಕಾನೂರು ಎಂಎಸ್ಡಿ ಕ್ರಿಕೆಟರ್ಸ್ ವತಿಯಿಂದ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬುಧವಾರ ನಡೆದ 4ನೇ ವರ್ಷದ ಕಾನೂರು ಕ್ರಿಕೆಟ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಕುಟ್ಟ ಸಿವೈಸಿ ತಂಡ ಜಯ ಗಳಿಸಿ, ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ಸಿವೈಸಿ ತಂಡ ಕಾನೂರು ಫಾರೆಸ್ಟ್ ರೈಡರ್ ತಂಡವನ್ನು 54 ರನ್ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಸಿವೈಸಿ ತಂಡ ನಿಗದಿತ 8 ಓವರ್ಗಳಲ್ಲಿ 108 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ನಡೆಸಿದ ಕಾನೂರು ಫಾರೆಸ್ಟ್ ರೈಡರ್ ತಂಡ ನಿಗದಿತ ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 54 ರನ್ ಗಳಿಸಿತು.

ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಾಯಮುಡಿ ಎಂವೈಸಿ ತಂಡವನ್ನು ಕುಟ್ಟ ಸಿವೈಸಿ ತಂಡ ಮಣಿಸಿ ಫೈನಲ್ ಪ್ರವೇಶಿಸಿತ್ತು. 2ನೇ ಸೆಮಿಫೈನಲ್ನಲ್ಲಿ ಫಾರೆಸ್ಟ್ ರೈಡರ್ಸ್ ತಂಡ ಕಾನೂರು ಎಂಎಸ್ ಡಿ ತಂಡದ ವಿರುದ್ಧ ಜಯ ಗಳಿಸಿತು.

ವೈಯಕ್ತಿಕ ಪ್ರಶಸ್ತಿ: ಅತ್ಯುತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ ಫಾರೆಸ್ಟ್ ರೈಡರ್ಸ್ ತಂಡದ ಮಾಚಮಾಡ ಬೋಪಣ್ಣ, ಬೆಸ್ಟ್ ಬೌಲರ್ ಪ್ರಶಸ್ತಿ ಕೆವೈಸಿ ತಂಡದ ಮಹಮದ್ ರಾಫಿ, ಬೆಸ್ಟ್ ಫೀಲ್ಡರ್ ಎಂಎಸ್ಡಿ ತಂಡದ ಜೀವನ್, ಸರಣಿ ಪುರುಷೋತ್ತಮ ಫಾರೆಸ್ಟರ್ ತಂಡದ ನಂದೀಶ್ ಪಡೆದುಕೊಂಡರು. ಅತ್ಯುತ್ತಮ ತಂಡದ ಪ್ರಶಸ್ತಿಯನ್ನು ಸಿಎಸ್ಸಿ ತಂಡ ಗಳಿಸಿತು.

ದಾನಿಗಳಾದ ಕಾಡ್ಯಮಾಡ ಮಧು ಮಾಚಯ್ಯ, ಅನಿಲ್, ರತನ್ ಕುಮಾರ್, ಸುಬ್ರಮಣಿ, ಎಂಎಸ್ಡಿ ತಂಡದ ಜೆ.ಆರ್.ಮಣಿ ನಿಖಿಲ್, ಅನಿಲ್ ಜೋಯಪ್ಪ, ಚೇತನ್, ಸಫೀಕ್, ನಿತಿನ್ಗೌಡ ಬಹುಮಾನ ವಿತರಿಸಿದರು.

4ನೇ ವರ್ಷದ ಕಾನೂರು ಕ್ರಿಕೆಟ್ ಪ್ರೀಮಿಯರ್ ಲೀಗ್ 54 ರನ್ಗಳಿಂದ ಸಿವೈಸಿ ತಂಡಕ್ಕೆ ಗೆಲುವು ದ್ವಿತೀಯ ಸ್ಥಾನ ಪಡೆದ ಕಾನೂರು ಫಾರೆಸ್ಟರ್ ರೈಡರ್ಸ್ ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.