ಸದ್ಯ ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿರುವೆ. ಊರಿಗೆ ಬಂದ ತಕ್ಷಣ ಮಾಹಿತಿ ಪಡೆದು ಅಗತ್ಯ ಕ್ರಮಕ್ಕೆ ಮುಂದಾಗುವೆ.ಜಿ.ಎಸ್. ಪಾಟೀಲ ರೋಣ ಶಾಸಕ ಹಾಗೂ ಎಸ್‌ಎವಿವಿಪಿ ಸಮಿತಿ ಉಪಾಧ್ಯಕ್ಷ
ಮಠದ ಉಚಿತ ಪ್ರಸಾದ ನಿಲಯದ ಆಸ್ತಿ ವಕ್ಫ್ ಹೆಸರಿಗೆ ಹೇಗಾಯಿತೆಂದು ಪರಿಶೀಲನೆ ಮಾಡಿ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದುಕಿರಣಕುಮಾರ ಜಿ. ಕುಲಕರ್ಣಿ ತಹಶೀಲ್ದಾರ್ ಗಜೇಂದ್ರಗಡ ತಾಲ್ಲೂಕು
ಯಾವುದೇ ನೋಟಿಸ್ ನೀಡದೇ 2019ರಲ್ಲಿ ಪಹಣಿಯಲ್ಲಿ ವಕ್ಫ್ ಹೆಸರು ಸೇರಿಸಲಾಗಿದೆ ಎಂದು ಕೇಳಲ್ಪಟ್ಟಿದ್ದೇವೆ. ಆಗಿನ ವೇಳೆ ನಮ್ಮ ಹಿರಿಯ ಗುರುಗಳು ಹೈಕೋರ್ಟ್‌ಗೆ ಅಪೀಲ್ ಹೋಗಿದ್ದರು. ಅದು ಇನ್ನೂ ಇತ್ಯರ್ಥವಾಗಿಲ್ಲ. ಇದು ಕೇವಲ ನಮ್ಮ ಮಠದ ಸಮಸ್ಯೆ ಎಂದುಕೊಂಡಿದ್ದೆವು. ಆದರೆ ನಾಡಿನಾದ್ಯಂತ ಸಮಸ್ಯೆಯಾಗಿರುವ ಕಾರಣ ಸರ್ಕಾರ ಆದಷ್ಟು ಬೇಗ ಪರಿಹಾರ ಒದಗಿಸುತ್ತದೆ ಎನ್ನುವ ಭರವಸೆ ನಮಗಿದೆಮುಪ್ಪಿನ ಬಸವಲಿಂಗ ಸ್ವಾಮೀಜಿ, ಪೀಠಾಧಿಪತಿ, ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ
ರಾಜ್ಯದಾದ್ಯಂತ ಗುಡಿಗಳು, ಮಠ, ಶಾಲೆ, ರೈತರ ಹೊಲಗಳೆಲ್ಲವೂ ವಕ್ಫ್ ಆಸ್ತಿ ಎಂದು ದಾಖಲಿಸುತ್ತಿರುವುದು ಸರ್ಕಾರದ ಕೆಟ್ಟ ನಿರ್ಧಾರವಾಗಿದೆ. ಹಿಂದೂಗಳು ಹೀಗೇ ಕುಳಿತುಕೊಂಡರೆ ಆಸ್ತಿಗಳು ಉಳಿಯುವುದಿಲ್ಲ. ರಾಜ್ಯದ ಎಲ್ಲ ಮಠಾಧೀಶರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ನಾಳೆ ಅವರ ಮಠವೂ ವಕ್ಫ್ ಆಸ್ತಿ ಆಗಿರುತ್ತದೆ.ಕಳಕಪ್ಪ ಜಿ. ಬಂಡಿ, ಮಾಜಿ ಸಚಿವ
ಹಿಂದೂ-ಮುಸ್ಲಿಂ, ಪರಿಶಿಷ್ಟ ಸಮುದಾಯ, ಹಿಂದುಳಿದ, ಎನ್ನದೇ ಎಲ್ಲರಿಗೂ ಅನ್ನ-ಅಕ್ಷರ ದಾನ ಮಾಡುವ ಮೂಲಕ ನಮ್ಮ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಅನ್ನದಾನೇಶ್ವರ ಮಠದ ಶ್ರೀ ಮಾಡಿದ್ದಾರೆ. ಆದರೆ ಈ ಮಠದ ಉಚಿತ ಪ್ರಸಾದ ನಿಲಯದ ಆಸ್ತಿ ವಕ್ಫ್ ಹೆಸರಿಗೆ ದಾಖಲಿಸಿರುವ ಬಗ್ಗೆ ನಮಗೆ ಗೊತ್ತಿಲ್ಲ. ಇದಕ್ಕೆ ನಮ್ಮ ವಿರೋಧವಿದೆ. ಸರ್ಕಾರದ ಮಟ್ಟದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡು ಮೊದಲಿನಂತೆ ಮಾಡಬೇಕು.ಎ.ಎ. ನವಲಗುಂದ, ಅಧ್ಯಕ್ಷ, ಅಂಜುಮನ್ ಇಸ್ಲಾಮಿಕ್ ಕಮಿಟಿ, ನರೇಗಲ್
ನಮ್ಮದು ವಂಶಾವಳಿ ಇರುವ ದರ್ಗಾ. ನಮಗೆ ವಕ್ಫ್ ಸಂಬಂಧವಿಲ್ಲ. ಎಲ್ಲರೂ ದೂರವಾಣಿ ಕರೆ ಮಾಡಿ ಕೇಳುತ್ತಿರುವ ಆಸ್ತಿ ಎಲ್ಲಿದೆ ಎಂಬುದು ನಮಗೆ ಗೊತ್ತಿಲ್ಲ. ಹೀಗಾಗಿ ಗ್ರಾಮದ ಹಿರಿಯರ ಸಭೆ ಕರೆದು ಚರ್ಚಿಸಿ ನಂತರ ಮುಂದಿನ ನಿರ್ಧಾರ ತಿಳಿಸಲಾಗುವುದುಸಯ್ಯದ್ ಮಂಜೂರ ಹುಸೇನ ಶ್ಯಾವಲಿ, ರಹಿಮಾನ ಶಾವಲಿ ದರ್ಗಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.