ಮೆಟ್ಜ್ (ಫ್ರಾನ್ಸ್): ಭಾರತದ ಬೊಲ್ಲಿಪಲ್ಲಿ ರಿತ್ವಿಕ್ ಚೌಧರಿ ಮತ್ತು ಅವರ ಜೊತೆಗಾರ ಫ್ರಾನ್ಸಿಸ್ಕೊ ಕ್ಯಾಬ್ರಾಲ್ ಅವರು ಮೊಸೆಲ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜೋಡಿಯನ್ನು ಸೋಲಿಸಿ ಸೆಮಿಫೈನಲ್ಗೇರಿದರು.

ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಿತ್ವಿಕ್– ಪೋರ್ಚುಗಲ್ ಆಟಗಾರ ಕ್ಯಾಬ್ರಲ್ 7–6 (1), 6–4 ರಿಂದ ಅಗ್ರ ಶ್ರೇಯಾಂಕದ ಗೊನ್ಜಾಲ್ವೆಸ್ (ಮೆಕ್ಸಿಕೊ)– ರೋಜರ್ ವ್ಯಾಸೆಲಿನ್ (ಫ್ರಾನ್ಸ್) ಜೋಡಿಯನ್ನು ಮಣಿಸಿದರು. ಹೈದರಾಬಾದಿನ ಬೊಲ್ಲಿಪಲ್ಲಿ ರಿತ್ವಿಕ್, ಎಟಿಪಿ ಟೂರ್ನಿಯೊಂದರ ಸೆಮಿಫೈನಲ್ ತಲುಪುತ್ತಿರುವುದು ಇದೇ ಮೊದಲು.

ಎಟಿಪಿ 250 ಮಟ್ಟದ ಈ ಟೂರ್ನಿಯಲ್ಲಿ ಆಡಿದ್ದ ಭಾರತದ ಇನ್ನಿಬ್ಬರಾದ ಸುಮಿತ್ ನಗಾಲ್ ಮತ್ತು ಎನ್. ಶ್ರೀರಾಮ್ ಬಾಲಾಜಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.