ಮೈಸೂರು: ‘ವಕ್ಫ್ ಮಂಡಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಿಲ್ಲೆಯ 443 ಎಕರೆ 37 ಗುಂಟೆ ಸರ್ಕಾರಿ ಭೂಮಿಯನ್ನು ನೀಡಿದೆ’ ಎಂದು ಬಿಜೆಪಿ ಮುಖಂಡ ಪ್ರತಾಪ ಸಿಂಹ ಆರೋಪಿಸಿದರು.

ಜಲದರ್ಶಿನಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಗೋಮಾಳ, ಸೇಂದಿ ವನ, ಹುಲ್ಲುಬನಿ, ರೈತರ ಜಮೀನು, ಮಠ ಹಾಗೂ ದೇವಸ್ಥಾನಗಳ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಡಳಿಗೆ ಪರಭಾರೆ ಮಾಡಲಾಗಿದೆ. ನೆರೆಯ ಚಾಮರಾಜನಗರ ಜಿಲ್ಲೆಯ 175 ಎಕರೆ 2 ಗುಂಟೆ ಭೂಮಿ ನೀಡಲಾಗಿದೆ’ ಎಂದರು.

ಎಲ್ಲೆಲ್ಲಿ ಎಷ್ಟು ಭೂಮಿ: ‘ಭೂ ದಾಖಲೆಗಳು ಬದಲಾಗಿರುವ ಆತಂಕ ರೈತರು, ದೇವಸ್ಥಾನ, ಮಠಗಳಿಗೂ ಕಾಡುತ್ತಿದೆ. ಮೈಸೂರು ತಾಲ್ಲೂಕಿನ 44.25 ಎಕರೆ, ಪಿರಿಯಾಪಟ್ಟಣದ 33 ಎಕರೆ 21 ಗುಂಟೆ, ಎಚ್.ಡಿ.ಕೋಟೆಯ 91 ಎಕರೆ, ತಿ.ನರಸೀಪುರದ 113 ಎಕರೆ, ಕೆ.ಆರ್.ನಗರದ 99 ಎಕರೆ, ನಂಜನಗೂಡಿನ 53 ಎಕರೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ 21 ಎಕರೆ, ಕೊಳ್ಳೇಗಾಲದ 117 ಎಕರೆ, ಯಳಂದೂರಿನ 11 ಎಕರೆ ಹಾಗೂ ಚಾಮರಾಜನಗರ ತಾಲ್ಲೂಕಿನ 21 ಎಕರೆ ಭೂಮಿ ವಕ್ಫ್ ಮಂಡಳಿಗೆ ಪರಾಭಾರೆ ಮಾಡಿರುವ ದಾಖಲೆಗಳಿವೆ’ ಎಂದು ಪ್ರತಾಪ ಸಿಂಹ ಮಾಹಿತಿ ನೀಡಿದರು.

‘ಅವಿಭಜಿತ ಜಿಲ್ಲೆಯಾಗಿದ್ದಾಗ 1965ರ ನ.4ರಂದು ಸಾಂವಿಧಾನಿಕ ಹಕ್ಕು ಇಲ್ಲದಿದ್ದರೂ ವಕ್ಫ್ ಗೆಜೆಟ್ ನೋಟಿಫಿಕೇಶನ್ ಹೊರಡಿಸಿತ್ತು. ಆದರೆ, ಭೂಮಿ ವಶಕ್ಕೆ ಮುಂದಾಗಿರಲಿಲ್ಲ. 1995, 2013ರ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ಆಧರಿಸಿ 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ವಕ್ಫ್ ಆಸ್ತಿಯ ಖಾತೆಯನ್ನು ವಕ್ಫ್ ಮಂಡಳಿಗೆ ಹೆಸರಿಗೆ ಬದಲಾವಣೆ ಮಾಡಿಕೊಡಲು ಸುತ್ತೋಲೆ ಹೊರಡಿಸಿತ್ತು. ಪಹಣಿ 9ರಲ್ಲಿ ತ್ವರಿತಗತಿಯಲ್ಲಿ ನಮೂದಿಸಬೇಕೆಂದು ಕಂದಾಯ ಅಧಿಕಾರಿಗಳಿಗೆ ಸೂಚಿಸಿತ್ತು’ ಎಂದು ವಿವರಿಸಿದರು.

‘ಆಸ್ತಿಯನ್ನು ಪರಿಶೀಲಿಸದೇ ಹಿಂದೂಗಳ ಆಸ್ತಿಯನ್ನು ವಕ್ಫ್ ಕಬಳಿಸುತ್ತಿದೆ. ಇದೇನು ಸರ್ಕಾರಿ ಸಂಸ್ಥೆಯೇ? ಹಿಂದೂಗಳ ಭೂಮಿ ವಶಪಡಿಸಿಕೊಳ್ಳಲು ಅದಕ್ಕೆ ಅಧಿಕಾರ ಕೊಟ್ಟವರು ಯಾರು? ದೇವರಾಜ ಅರಸು ಅವರು ಜಾರಿಗೊಳಿಸಿದ ‘ಉಳುವವನೇ ಭೂ ಒಡೆಯ’ ಕಾನೂನು ಅನ್ವಯವಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘2016ರಲ್ಲಿ ಹುಣಸೂರು ತಾಲ್ಲೂಕಿನ ಕಟ್ಟಮಳಲವಾಡಿಯ 8 ಎಕರೆ ಸೇಂದಿವನ ಭೂಮಿಯನ್ನು ವಕ್ಫ್ ಕಬಳಿಸಿತ್ತು. ನಾನು ತಕರಾರು ಸಲ್ಲಿಸಿದ ಮೇಲೆ ತಹಶೀಲ್ದಾರ್ ಅವರು ಉಪವಿಭಾಗಾಧಿಕಾರಿ ಕೋರ್ಟ್ನ ಮೂಲಕ ಪಹಣಿಯನ್ನು ರದ್ದುಗೊಳಿಸಿ ದೇವಸ್ಥಾನಕ್ಕೆ ಮರಳಿಸಿದ್ದರು’ ಎಂದು ಉದಾಹರಿಸಿದರು.

‘ಸರ್ಕಾರದ ವಿರುದ್ಧ ಪಕ್ಷದ ಕಾರ್ಯಕರ್ತರು ನ.22ರಂದು ರಾಜ್ಯವ್ಯಾಪಿ ಹೋರಾಟ ನಡೆಸಲಿದ್ದಾರೆ’ ಎಂದರು.

ಮುಖಂಡರಾದ ಯೋಗಾನಂದ, ಮೈ.ವಿ.ರವಿಶಂಕರ್ ಹಾಜರಿದ್ದರು.

ವಕ್ಫ್ ಆಸ್ತಿಗಳನ್ನು ಮುಸ್ಲಿಂ ಮುಖಂಡರೇ ಕಬಳಿಸಿದ್ದಾರೆ. ಅವರಿಂದ ಅಂಥ ಆಸ್ತಿಗಳನ್ನು ಉಳಿಸಿಕೊಳ್ಳಲಿ. ಹಿಂದೂಗಳ ಭೂಮಿ ಮೇಲೆ ಕಣ್ಣು ಹಾಕಬೇಕು
ಪ್ರತಾಪ ಸಿಂಹ ಬಿಜೆಪಿ ಮುಖಂಡ

‘ಆಶ್ರಯಕೊಟ್ಟಿದ್ದೇ ನಾವು’

‘ಇಸ್ಲಾಂ ಕ್ರೈಸ್ತ ಧರ್ಮಗಳು ಮರುಭೂಮಿಯಲ್ಲಿ ಹುಟ್ಟಿ ದೇಶಕ್ಕೆ ನೆಲೆ ಕಂಡುಕೊಳ್ಳಲು ಬಂದಿವೆ. ಅದಕ್ಕೆ ಆಶ್ರಯಕೊಟ್ಟಿರುವುದೇ ನಾವು’ ಎಂದು ಪ್ರತಾಪ ಸಿಂಹ ಹೇಳಿದರು. ಮಂತ್ರಾಲಯಕ್ಕೆ ಮುಸ್ಲಿಂ ಸಮುದಾಯವೇ ಭೂಮಿ ದಾನ ಮಾಡಿದೆಯೆಂಬ ಮುಖಂಡ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ ‘ಹಿಂದೂಗಳಿಗೆ ಭೂಮಿ ದಾನ ಮಾಡಲು ಭಾರತದಲ್ಲಿ ಭೂಮಿ ನಿಮಗೆಲ್ಲಿಂದ ಬಂತು. ಮಹಮ್ಮದ್ ಘಜ್ನಿ ಬಾಬರ್ ಎಲ್ಲರೂ ಇಲ್ಲಿಗೆ ಬಂದು ಭೂಮಿ ವಶಪಡಿಸಿಕೊಂಡಿದ್ದರು. ನಮ್ಮ ಭೂಮಿಯನ್ನು ಹೋರಾಟ ಮಾಡಿ ಉಳಿಸಿಕೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.