ಮೈಸೂರು: ಪತ್ರಾಗಾರ ಇಲಾಖೆಯು ಸಂಗ್ರಹಿಸಿರುವ ಇನ್ನೂರು ವರ್ಷಗಳಿಗಿಂತಲೂ ಹಳೆಯ ಐತಿಹಾಸಿಕ ದಾಖಲೆಗಳು ಎಂಎಂಕೆ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ರಾಜ್ಯದ ಐತಿಹಾಸಿಕ ಘಟನೆಗಳನ್ನು ಸಾದರಪಡಿಸುತ್ತಿವೆ.

ಯದುವಂಶದ ಅರಸರ ವಂಶಾವಳಿ, ರೆಸಿಡೆಂಟ್ ಹಾಗೂ ದಿವಾನರ ಪಟ್ಟಿಯು ರಾಜರ ಕಾಲದ ಆಡಳಿತ ನೀತಿಯನ್ನು ವಿವರಿಸುತ್ತಿವೆ. 1882ರಲ್ಲಿ ಮೈಸೂರು ದಿವಾನರ ಖಾಸಗಿ ಕಾರ್ಯದರ್ಶಿಯಾಗಿ ರಂಗಾಚಾರ್ಲು ಅವರನ್ನು ನೇಮಕ ಮಾಡಿರುವ ಆದೇಶದಿಂದ ತೊಡಗಿ, 1940ರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದ ಪ್ರಮುಖ ಘಟನೆಗಳ ಕುರಿತ ಪತ್ರಗಳು ಕುತೂಹಲ ಮೂಡಿಸುತ್ತವೆ.

ಹಳೆಯ ಅರಮನೆಯಲ್ಲಿನ ದಸರಾ ಕಲಾಪದ ಛಾಯಾಚಿತ್ರಗಳು ಅಂದಿನ ವೈಭವವನ್ನು ವರ್ಣಿಸುತ್ತಿದ್ದು, ಅಂದು ಅರಮನೆಯ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಹೊರ ರಾಜ್ಯದ ಕಲಾವಿದರನ್ನು ಕರೆತಂದಿರುವ ಬಗ್ಗೆ ಬರಹವುಳ್ಳ ಪತ್ರಗಳೂ ಪ್ರದರ್ಶನಗೊಂಡಿವೆ. ವಾಣಿ ವಿಲಾಸ ಅರಸು ಗರ್ಲ್ಸ್ ಸ್ಕೂಲ್ ಪ್ರಾರಂಭೋತ್ಸವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾಷಣದ ಪ್ರತಿ ಪ್ರದರ್ಶನ ಮಾಡಿದ್ದು, ಶಿಕ್ಷಣದ ಬಗ್ಗೆ ಅವರಿಗಿದ್ದ ಕಾಳಜಿಯನ್ನು ತೋರಿಸುತ್ತಿದೆ.

1947ರಲ್ಲಿ ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ಮೇಲೆ ನಡೆದ ಗೋಲಿಬಾರ್ ಹಾಗೂ ರಾಮಸ್ವಾಮಿ ವೃತ್ತದ ಬಳಿ ಮೂವರು ಮೃತಪಟ್ಟಿರುವ ಕುರಿತ ಪತ್ರಿಕಾ ವರದಿ, ಮಹಾತ್ಮ ಗಾಂಧಿ ನಿಧನರಾದ ಸಮಯದಲ್ಲಿ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮೈಸೂರು ಸಂಸ್ಥಾನದ ಮಹಾರಾಣಿ ಮಾಡಿರುವ ಭಾಷಣದ ಪ್ರತಿ, 1956ರಲ್ಲಿ ಕನ್ನಡ ಪ್ರಾಂತ್ಯಕ್ಕೆ ಮೈಸೂರು ಎಂದು ನಾಮಕರಣವಾದ ಅಪರೂಪದ ದಾಖಲೆಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಇದು ಶನಿವಾರ ಮುಕ್ತಾಯಗೊಳ್ಳಲಿದೆ.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೀತಿ ಶುಭಚಂದ್ರ, ಪತ್ರಾಗಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಎಲ್.ಮಂಜುನಾಥ, ಮಹೇಶ್, ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್.ಭಾರತಿ, ಕನ್ನಡ ವಿಭಾಗದ ಮುಖ್ಯಸ್ಥೆ ವಿನೋದಾ ಇದ್ದರು.

ಪ್ರದರ್ಶನಕ್ಕೆ ಚಾಲನೆ

ಐತಿಹಾಸಿಕ ದಾಖಲೆ ಹಾಗೂ ಛಾಯಾಚಿತ್ರಗಳ ಪ್ರದರ್ಶನಕ್ಕೆ ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕ ಗವಿಸಿದ್ದಯ್ಯ ಚಾಲನೆ ನೀಡಿ ಮಾತನಾಡಿ ‘ದಾಖಲೆಗಳು ಇತಿಹಾಸದ ಮೂಲಾಧಾರಗಳಾಗಿದ್ದು ಅವು ನಾಡಿನ ಅಭಿವೃದ್ಧಿಗೆ ಪೂರಕ. ಹೀಗಾಗಿ ದಾಖಲೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. 1399ರಿಂದ 1947ರವರೆಗಿನ 25 ಯದುವಂಶದ ರಾಜರ ಹೆಸರನ್ನು ಪ್ರದರ್ಶಿಸಲಾಗಿದೆ. 1866ರಿಂದ 2019ರವರೆಗಿನ ದಾಖಲೆಗಳನ್ನು ಇಲಾಖೆ ಸಂಗ್ರಹಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.