ಮೈಸೂರು: ಕೃಷಿ ಪ್ರವಾಸೋದ್ಯಮವು ಕೃಷಿ ಉತ್ಪನ್ನಗಳ ಮಾರುಕಟ್ಟೆಗೊಂದು ಹೊಸ ಆಯಾಮವಾಗಿದೆ. ರೈತರು ಪರ್ಯಾಯವಾಗಿ ಆದಾಯ ಕಂಡುಕೊಳ್ಳುವ ಮಾರ್ಗವಾಗಿದ್ದು, ಇದನ್ನು ಬಳಸಿಕೊಳ್ಳಲು ಮುಂದಾಗಬೇಕು.

– ಇಲ್ಲಿನ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಆರಂಭವಾದ ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ವ್ಯಕ್ತವಾದ ಸಲಹೆ ಇದು.

ಜೈಪುರದ ಚರಣ್ಸಿಂಗ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆ (ಎನ್ಐಎಎಂ), ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಮೈಸೂರಿನ ವಿಶ್ವೇಶ್ವರಯ್ಯ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ‘ಕೃಷಿ ಪ್ರವಾಸೋದ್ಯಮ-ಕೃಷಿ ಉತ್ಪನ್ನಗಳ ಮಾರುಕಟ್ಟೆಗೊಂದು ಹೊಸ ಆಯಾಮ’ ಕುರಿತ ತರಬೇತಿ ಕಾರ್ಯಕ್ರಮವು, ಆಸಕ್ತರಿಗೆ ಹಲವು ಒಳನೋಟಗಳನ್ನು ನೀಡಿತು. ವಿಷಯ ತಜ್ಞರು ಈ ವಿಷಯದಲ್ಲಿ ಮಾರ್ಗದರ್ಶನವನ್ನೂ ಮಾಡಿದರು. ಕೃಷಿ ಪ್ರವಾಸೋದ್ಯಮವನ್ನು ಕೃಷಿಕರು ಹೇಗೆ ಆರ್ಥಿಕವಾಗಿ ಲಾಭದಾಯವನ್ನಾಗಿ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು.

ಪರಿಚಯಿಸುವ ಜೊತೆಗೆ ಉಳಿಸಬಹುದು: ಪ್ರವಾಸಿಗರಿಗೆ ಗ್ರಾಮೀಣ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಕೃಷಿ ಪ್ರವಾಸೋದ್ಯಮದ ಮೂಲಕ ಮಾಡಬಹುದಾಗಿದೆ. ಇದು ಕೃಷಿ ಹಾಗೂ ರೈತರ ಆದಾಯವನ್ನು ಹೆಚ್ಚುಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುತ್ತದೆ. ಸ್ಥಳೀಯವಾಗಿ ದೊರೆಯುವ ಕೃಷಿ ಉತ್ಪನ್ನಗಳ ಅರಿವನ್ನು ಮೂಡಿಸುತ್ತದೆ. ನಗರಗಳ ಜನರು ಕೃಷಿ ಚಟುವಟಿಕೆಯ ಬಗ್ಗೆ ತಿಳಿದುಕೊಳ್ಳಲು ಸಹಕಾರಿ. ಮಾರುಕಟ್ಟೆ ವಿಸ್ತರಣೆಯೂ ಸಾಧ್ಯವಾಗಲಿದೆ. ಆ ಭಾಗದ ಪ್ರವಾಸೋದ್ಯಮಕ್ಕೂ ಚೈತನ್ಯ ದೊರೆಯುತ್ತದೆ ಎಂದು ತಿಳಿಸಿದರು.

ಜಮೀನು ಹೊಂದಿರುವವರು ಹಾಗೂ ವಿಶೇಷವಾಗಿ ಕೃಷಿ ಮಾಡುತ್ತಿರುವವರು ಅಗತ್ಯ ಸೌಲಭ್ಯಗಳನ್ನು ಹೊಂದಿದರೆ ಕೃಷಿ ಪ್ರವಾಸೋದ್ಯಮದಲ್ಲಿ ತೊಡಗಲು ಅವಕಾಶವಿದೆ ಎಂದು ಹೇಳಿದರು.

ಬಳಸಿಕೊಳ್ಳಿ: ಕೇಂದ್ರ ಕೃಷಿ ಸಚಿವಾಲಯದ ಮಾರುಕಟ್ಟೆ ಹಾಗೂ ತಪಾಸಣೆ ನಿರ್ದೇಶನಾಲಯದ ಚೆನ್ನೈ ಪ್ರಾದೇಶಿಕ ಕಚೇರಿಯ ಸಹಾಯಕ ಕೃಷಿ ಮಾರುಕಟ್ಟೆ ಸಲಹೆಗಾರ ಎಸ್.ಶಿವಕುಮಾರ್ ಮಾತನಾಡಿ, ‘ರೈತರು ಕೃಷಿ ಪ್ರವಾಸೋದ್ಯಮದಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಲು ಸರ್ಕಾರಗಳ ಯೋಜನೆಗಳ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ (ಕೃಷಿ) ಎನ್.ಕೇಶವಮೂರ್ತಿ, ‘ಕೃಷಿ ಪ್ರವಾಸೋದ್ಯಮದಿಂದ ಹಲವು ಲಾಭ ಇವೆ. ಮೊದಲಿಗೆ ರೈತರ ಪೂರ್ಣ ಕುಟುಂಬ ಜಮೀನಿನಲ್ಲೇ ವಾಸಿಸುತ್ತದೆ. ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶಕ್ಕಾದರೂ ಸಮಗ್ರ ಕೃಷಿ ಪದ್ಧತಿಯ ಅಳವಡಿಕೆ ಆಗುತ್ತದೆ. ಜೀವ ಹಾಗೂ ಸಸ್ಯ ವೈವಿಧ್ಯ ಸೃಷ್ಟಿಯಾಗುತ್ತದೆ. ಆದಾಯದ ಮೂಲ ಜಾಸ್ತಿಯಾಗುತ್ತದೆ. ಪ್ರವಾಸೋದ್ಯಮ ಇಲಾಖೆಯ ಸೌಲಭ್ಯ ಸದ್ಬಳಕೆ ಮಾಡಿಕೊಂಡರೆ ಹೊಸ ಆಯಾಮದತ್ತ ಹೊರಳಿ ಪರ್ಯಾಯವಾಗಿ ಆದಾಯವನ್ನೂ ಸೃಷ್ಟಿಸಿಕೊಳ್ಳಲು ಅವಕಾಶವಿದೆ’ ಎಂದು ತಿಳಿಸಿದರು.

ಸುಯಾತ್ರಿ ಸಮುದಾಯ ಪ್ರವಾಸೋದ್ಯಮ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ಸಿಇಒ ಸುಮೇಶ್ ಮಂಗಲ್ಸೇರಿ ‘ಸಮುದಾಯ ಆಧಾರಿತ ಪ್ರವಾಸೋದ್ಯಮದ ಮೂಲಕ ಗ್ರಾಮದ ಆರ್ಥಿಕತೆ ಚೈತನ್ಯ’ ವಿಷಯವನ್ನು ಮಂಡಿಸಿದರು.

ಚರಣ್ಸಿಂಗ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಯ ಉಪನಿರ್ದೇಶಕ ಎಸ್.ಆರ್ ಸಿಂಗ್ ಮಾರ್ಗದರ್ಶನ ನೀಡಿದರು. ಆಕಾಶವಾಣಿಯ ಉಪನಿರ್ದೇಶಕ (ಕಾರ್ಯಕ್ರಮ) ಉಮೇಶ್ ಎಸ್.ಎಸ್. ಉದ್ಘಾಟಿಸಿದರು. ವಿಶ್ವೇಶ್ವರಯ್ಯ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಎಲ್. ಶಿವಪ್ರಸಾದ್, ನಿರ್ದೇಶಕ ಡಿ.ಎನ್. ಹರ್ಷ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.