ಟೆಂಡರ್ ಪ್ರಕ್ರಿಯೆ ಆರಂಭ, ಪೂರ್ಣಗೊಳ್ಳಲು 11 ತಿಂಗಳು ಬೇಕು
ಎಂ. ಮಹೇಶ
Published : 8 ಫೆಬ್ರುವರಿ 2024, 7:15 IST
Last Updated : 8 ಫೆಬ್ರುವರಿ 2024, 7:15 IST
ಫಾಲೋ ಮಾಡಿ
Comments
2012ರಲ್ಲೇ ಪ್ರಾರಂಭ...
ಭವನದ ನಿರ್ಮಾಣ ಕಾಮಗಾರಿಯನ್ನು 2012ರಲ್ಲಿ ಪ್ರಾರಂಭಿಸಲಾಗಿತ್ತು. ಆದರೂ ನಡೆದಿರುವುದು ಕಟ್ಟಡ ನಿರ್ಮಾಣದ ಕೆಲಸವಷ್ಟೆ. ಕಟ್ಟಡದ ಸುತ್ತಲೂ ನಿರ್ವಹಣೆಗೆ ಆದ್ಯತೆ ನೀಡುತ್ತಿಲ್ಲ. ಇದು ಅಂಬೇಡ್ಕರ್ ಅನುಯಾಯಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆರಂಭದಲ್ಲಿ ₹ 14.66 ಕೋಟಿಗೆ ಯೋಜನೆ ರೂಪಿಸಲಾಗಿತ್ತು. ಅದು ಪರಿಷ್ಕರಣೆಗೊಂಡು ₹ 20.66 ಕೋಟಿಗೆ ಏರಿಕೆಯಾಯಿತು. ಮುಡಾದಿಂದ ₹ 10.56 ಕೋಟಿ ಸಮಾಜ ಕಲ್ಯಾಣ ಇಲಾಖೆಯಿಂದ ₹ 6.50 ಕೋಟಿ ಮಹಾನಗರಪಾಲಿಕೆಯಿಂದ ₹ 3 ಕೋಟಿ ಹಾಗೂ ಜಿ.ಪಂ.ಯಿಂದ ₹ 50 ಲಕ್ಷ ನೀಡಲಾಗಿದೆ. ಪರಿಷ್ಕರಿಸಲಾದ ಅಂದಾಜು ಪಟ್ಟಿಗೆ 2018ರ ಜ.8ರಂದು ಆಡಳಿತಾತ್ಮಕ ಅನುಮೋದನೆ ಕೊಡಲಾಗಿದೆ! ಹೊರ ಹಾಗೂ ಒಳಭಾಗದ ಸಿವಿಲ್ ಕಾಮಗಾರಿಗಳು ಶೇ 70ರಷ್ಟು ಮಾತ್ರವೇ ಪೂರ್ಣಗೊಂಡಿದೆ.