ಮೈಸೂರು: ಹಿರಿಯ ರಂಗ ಕಲಾವಿದರಾದ ಯರಗನಹಳ್ಳಿಯ ರಾಜಕುಮಾರರಸ್ತೆಯ ನಿವಾಸಿ ಎಸ್.ಎಸ್.ಗಾಯತ್ರಿ (68) ಬುಧವಾರ ನಿಧನ ಹೊಂದಿದರು. ಇವರ ಅಂತ್ಯಕ್ರಿಯೆಯು ಚಾಮುಂಡಿಬೆಟ್ಟದ ತಪ್ಪಲಿನ ಹರಿಶ್ಚಂದ್ರ ಘಾಟ್ನಲ್ಲಿ ಮಂಗಳವಾರ ನೆರವೇರಿತು. ಇವರಿಗೆ ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳು ಇದ್ದಾರೆ.

ಇವರು ಕಳೆದ 55 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ನೀಡುವ ‘ರಂಗದಸರಾ’ ಪ್ರಶಸ್ತಿ, ಕರ್ನಾಟಕ ರಂಗಪರಿಷತ್ತು ಕೊಡಮಾಡುವ ಕನ್ನಡಾಂಬೆ ಕಲಾ ಥಯೇಟರಿಸ್ಟ್ ಪ್ರಶಸ್ತಿಗೆ ಇವರು ಪಾತ್ರರಾಗಿದ್ದರು. ಮೈಸೂರು ಜಿಲ್ಲಾ ಕನ್ನಡ ವೃತ್ತಿರಂಗಭೂಮಿ ಕಲಾವಿದೆಯರ ಸಂಘದ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸಿದ್ದರು.

ಓಬಲೇಶ ಕಂಪೆನಿ, ಕೂಮಾರೇಶ್ವರ ನಾಟ್ಯಸಂಘ, ಕೆಬಿಆರ್ ಡ್ರಾಮ ಕಂಪೆನಿ ಸೇರಿದಂತೆ ಅನೇಕ ವೃತ್ತಿ ರಂಗಭೂಮಿಯ ಕಂಪೆನಿಗಳಲ್ಲಿ ಇವರು ಅಭಿನಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.