ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗವು ಇಲ್ಲಿನ ಮುಡಾ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದು, ವಿಚಾರಣೆ ನಡೆಸಿದೆ.

ಬೆಳಿಗ್ಗೆ ಕಚೇರಿಗೆ ಭೇಟಿ ನೀಡಿದ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು.

ಮುಡಾ ನಿವೇಶನ ಹಂಚಿಕೆ ಪ್ರಕರಣದ ಮೂರನೇ ಆರೋಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಮೈದ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಹಾಗೂ ನಾಲ್ಕನೇ ಆರೋಪಿ ಜೆ. ದೇವರಾಜು ಅವರನ್ನು ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ವಿಚಾರಣೆ ನಡೆಸಿದ್ದರು.

‘ಜಮೀನನ್ನು ಖರೀದಿಸಿದ್ದು ಯಾವಾಗ? ಆಗ ಮುಡಾದಿಂದ ಬಡಾವಣೆ ಆಗಿದ್ದು ಗಮನಕ್ಕೆ ಬಂದಿರಲಿಲ್ಲವೇ? ಖರೀದಿಸುವಾಗ ಜಮೀನು ಕೃಷಿ ಭೂಮಿಯಾಗಿತ್ತೆ? ಅನ್ಯಕ್ರಾಂತ ಆದೇಶ ಆಗಿದ್ದು ಯಾವಾಗ? ಪಾರ್ವತಿ ಅವರಿಗೆ ದಾನಪತ್ರದ ರೂಪದಲ್ಲಿ ಕೊಟ್ಟಿದ್ದು ಯಾವಾಗ? ಆದಾಯದ ಮೂಲವೇನು?’ ಎಂಬ ಕುರಿತು ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಮಾಹಿತಿ ಪಡೆದ ತನಿಖಾ ತಂಡವು ನಂತರ ಲಿಖಿತ ಹೇಳಿಕೆ ದಾಖಲಿಸಿಕೊಂಡು ಸಹಿ ಪಡೆದಿತ್ತು.

ಜಮೀನಿನ ಮಾಲೀಕ ಜೆ. ದೇವರಾಜು ಅವರ ವಿಚಾರಣೆ ನಡೆಸಿದ್ದ ತನಿಖಾಧಿಕಾರಿಗಳು, 1996ರಲ್ಲಿ ಜಮೀನಿನ ಡಿನೋಟಿಫೈಗೆ ಅರ್ಜಿ ಸಲ್ಲಿಸಿದ್ದಾಗಿನಿಂದ 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಜಮೀನು ಮಾರಿದ್ದರವರೆಗೆ ಪ್ರತಿ ಮಾಹಿತಿಯನ್ನೂ ಪಡೆದರು. ‘ಡಿನೋಟಿಫೈಗೆ ಅರ್ಜಿ ಸಲ್ಲಿಸಿದ್ದು ಯಾರು? ಜಮೀನು ನಿಮ್ಮ ಹೆಸರಿನಲ್ಲೇ ಇತ್ತೆ? ಮಾರಾಟಕ್ಕೆ ನಿಮ್ಮ ಸಹೋದರರ ಕುಟುಂಬ ಸದಸ್ಯರ ಒಪ್ಪಿಗೆ ಇತ್ತೆ? ಎಷ್ಟು ಮೊತ್ತಕ್ಕೆ ಕ್ರಯ ನಡೆದಿತ್ತು? ಎಂಬ ಮಾಹಿತಿ ಪಡೆದು ಹೇಳಿಕೆ ದಾಖಲಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.