ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ದಸರಾ ಮಹೋತ್ಸವ ಸಮಿತಿ ಸಹಯೋಗದಲ್ಲಿ ದಸರಾ ಅಂಗವಾಗಿ ಅ.15ರಿಂದ 23ರವರೆಗೆ ಇಲ್ಲಿನ ಕ್ರಾಫರ್ಡ್ ಹಾಲ್ ಎದುರಿನ ಓವೆಲ್ ಮೈದಾನದಲ್ಲಿ ‘ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ’ ಆಯೋಜಿಸಲಾಗಿದೆ.

ಅ.15ರಂದು ಸಂಜೆ 5ಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಉದ್ಘಾಟಿಸಲಿದ್ದಾರೆ. ಮೇಳದಲ್ಲಿ ಪ್ರತಿ ದಿನ ಹೆಸರಾಂತ ಸಾಹಿತಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

‘ಸೆಲ್ಫಿ ವಿತ್ ಸಾಹಿತಿ’ ಶೀರ್ಷಿಕೆಯಡಿ ಸಾಹಿತಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶವಿರಲಿದೆ. ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

15ರಂದು ಎನ್. ಬಸವಯ್ಯ ಮತ್ತು ತಂಡದವರು ಜನಪದ ಗಾಯನ ಪ್ರಸ್ತುತಪಡಿಸುವರು. 16ರಂದು ‘ನಗೆ ನುಡಿ’ ಕಾರ್ಯಕ್ರಮವನ್ನು ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ನಡೆಸಿಕೊಡುವರು. ಅ.17ರಂದು ಬೆಂಗಳೂರಿನ ಗಾನಸೌರಭ ಯಕ್ಷಗಾನ ಶಾಲೆಯವರು ‘ಕಂಸವಧೆ’ ಯಕ್ಷಗಾನ ಪ್ರಸಂಗ ಪ್ರಸ್ತುತಪಡಿಸುವರು.

18ರಂದು ವೈ.ಎಂ. ಪುಟ್ಟಣ್ಣಯ್ಯ ಹಾಗೂ ತಂಡದವರು ರಂಗಗೀತೆಗಳನ್ನು ಹಾಡುವರು. 19ರಮದು ಸುಗಮ ಸಂಗೀತ ಕಾರ್ಯಕ್ರಮವನ್ನು ಬೆಂಗಳೂರಿನ ಎಂ. ಖಾಸೀಮ್ ಮಲ್ಲಿಗೆ ಮತ್ತು ತಂಡ ನಡೆಸಿಕೊಡಲಿದೆ. 20ರಂದು ಬೆಂಗಳೂರಿನ ಉಷಾ ಬಿ. ನೃತ್ಯ ಪ್ರಸ್ತುತಪಡಿಸುವರು. 21ರಂದು ಗಂಗಾಧರಮೂರ್ತಿ ಅವರಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮವಿದೆ. 22ರಂದು ‘ಕರ್ನಾಟಕದಲ್ಲಿ ಶಿಲ್ಪಕಲೆಯ ವೈವಿಧ್ಯಗಳು’ ವಿಷಯದ ಕುರಿತು ರಾಘವೇಂದ್ರ ಎಚ್. ಕುಲಕರ್ಣಿ ಅವರಿಂದ ಉಪನ್ಯಾಸವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.