‘ಬತ್ತಿದ ಕೆರೆಗೆ ನೀರು ಹರಿಸಿದರು’
‘2011 ಹೊರತು ಪಡಿಸಿದರೆ, ಹುಯಿಲಾಳು ಹಾಗೂ ಮಾದಗಳ್ಳಿ ಕೆರೆಗಳು 2021ರವರೆಗೂ ಬತ್ತಿದ್ದವು. 2022ರಲ್ಲಿ ಜೋರು ಮಳೆಯಾದ್ದರಿಂದ ತುಂಬಿದ್ದವು. 2023ರ ಜನವರಿಯಲ್ಲೂ ಪೂರ್ಣ ನೀರಿತ್ತು. ಅದಕ್ಕೆ ಕಬಿನಿ–ಕಾವೇರಿ ನೀರು ತುಂಬಿಸಿದ್ದೇ ಕಾರಣ’ ಎಂದು ಪರಿಸರ ತಜ್ಞ ಯು.ಎನ್.ರವಿಕುಮಾರ್ ಹೇಳಿದರು.
‘2007, 2010, 2013, 2015, 2016, 2017, 2018, 2022ರವರೆಗೂ ಗೂಗಲ್ ಚಿತ್ರಗಳನ್ನು ಗಮನಿಸಿದಾಗ ಈ ಎರಡೂ ಕೆರೆಗಳು ಬತ್ತಿವೆ. ಕೆರೆಗೆ ನದಿ ನೀರು ತುಂಬಿಸಿದ್ದರಿಂದ ಮಳೆಗಾಲದಲ್ಲಿ ಹೆಚ್ಚುವರಿ ನೀರು ಕೋಡಿ ಬಿತ್ತು. ತೋಟಗಳಿಗೆ ನೀರು ನುಗ್ಗಿತು. ನಾಲೆಯ ಒತ್ತುವರಿಯೂ ಸೇರಿ ಮಾನವ ನಿರ್ಮಿತ ದುರಂತವಿದು’ ಎಂದರು.