ಮೈಸೂರು: ‘ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬಹುಮುಖ್ಯ. ಈಗಿನಿಂದಲೇ ಸೇವಾ ಮನೋಭಾವ ಬೆಳೆಸಿಕೊಳ್ಳಿ’ ಎಂದು ರೋಟರಿ ಕ್ಲಬ್ ಆಫ್ ಹೆರಿಟೇಜ್ ಅಧ್ಯಕ್ಷ ಆರ್.ರಾಜೇಶ್ ಹೇಳಿದರು.

ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ವತಿಯಿಂದ ವಿಶ್ವವಿದ್ಯಾಲಯದ ಆವರಣದಲ್ಲಿರುವ ಮಾನಸ ಗಂಗೋತ್ರಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ನಡೆದ ಹೊಸ ಇಂಟರ್ಯಾಕ್ಟ್ ಕ್ಲಬ್ನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ಉನ್ನತ ವಿದ್ಯಾಭ್ಯಾಸದತ್ತ ಮಕ್ಕಳು ಗಮಹರಿಸಬೇಕು. ಸಮಾಜಕ್ಕೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಲು ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.

ಅನುಸ್ಥಾಪನ ಅಧಿಕಾರಿ, ರೋಟರಿ ಕ್ಲಬ್ ಮೈಸೂರು ಸೆಂಟ್ರಲ್ ಕ್ಲಬ್ನ ಸದಸ್ಯ ಜಯಪ್ರಕಾಶ್ ಮಾತನಾಡಿದರು.

ಇಂಟರ್ಯಾಕ್ಟ್ ಕ್ಲಬ್ನ ನೂತನ ಅಧ್ಯಕ್ಷರಾಗಿ ವಿದ್ಯಾರ್ಥಿ ಪ್ರೀತಮ್, ಕಾರ್ಯದರ್ಶಿಯಾಗಿ ಧನುಷ್ ಅವರು ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಹೆರಿಟೇಜ್ನ ಸದಸ್ಯರಾದ ಗಜಾನನ ಶಂಭು ಹೆಗ್ಡೆ, ನಾರಾಯಣ ನಾಯಕ್, ಗೋಪಾಲಕೃಷ್ಣ, ಕ್ಲಬ್ ಸೇವೆ ನಿರ್ದೇಶಕ ಸುಧೀಂದ್ರ ಮಿಂಚು, ಶಾಲೆಯ ವಿಜ್ಞಾನ ಶಿಕ್ಷಕ ರವಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.