ಮೈಸೂರು: ‘ಅಸ್ಥಿರಂಧ್ರತೆಯು ಹಠಾತ್ತನೆ ಕಾಣಿಸಿಕೊಳ್ಳುವ ರೋಗವಾಗಿದ್ದು, ಸೂಕ್ತ ಅರಿವು ಇರಬೇಕು. ಸಕಾಲಿಕ ತಪಾಸಣೆ ಮಾಡಿಸುವುದರಿಂದ ಗುಣ ಪಡಿಸಬಹುದು’ ಎಂದು ಡಾ.ಪ್ರೇಮನಾಥ್ ಹೇಳಿದರು.

ಜೆಎಸ್ಎಸ್ ಆಸ್ಪತ್ರೆಯಲ್ಲಿ ಬುಧವಾರ ನಡೆದ ‘ವಿಶ್ವ ಆಷ್ಟಿಯೊಪೊರೊಸಿಸ್ ದಿನಾಚರಣೆ’ ಉದ್ಘಾಟಿಸಿ ಮಾತನಾಡಿ, ‘ನಿಶ್ಯಬ್ದ ಕಾಯಿಲೆಯಾಗಿರುವ ಇದು ಸಾಮಾನ್ಯವಾಗಿ ಸೊಂಟ, ಬೆನ್ನುಮೂಳೆ ಬಾಧಿಸುವವರೆಗೂ ಗೊತ್ತಾಗುವುದಿಲ್ಲ. ವೈದ್ಯಕೀಯ ತಪಾಸಣೆಗೆ ಒಳಗಾದರೆ ಮೂಳೆ ಮುರಿತ ತಡೆಯಬಹುದು’ ಎಂದರು.

‘ಮೂಳೆ ಸಾಂದ್ರತೆ ಕಾಪಾಡಿಕೊಳ್ಳಬೇಕು. ವೃದ್ಧರು, ಮಹಿಳೆಯರನ್ನು ಹೆಚ್ಚು ಕಾಡುವ ಕಾಯಿಲೆಯು ಆನುವಂಶೀಯವಾಗಿಯೂ ಬರುತ್ತದೆ. ದೇಹದ ತೂಕ ಕಡಿಮೆ ಇರುವುದು, ಕೆಲವು ಔಷಧಗಳ ದೀರ್ಘಾವಧಿ ಬಳಕೆ, ಸಂಧಿವಾತ ಸಮಸ್ಯೆ ಇರುವವರು ಈ ಬಗ್ಗೆ ಗಮನ ವಹಿಸಬೇಕು’ ಎಂದು ಸಲಹೆ ನೀಡಿದರು.

‘60 ವರ್ಷ ದಾಟಿದವರು ಮೂಳೆ ಖನಿಜ ಸಾಂದ್ರತೆ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳಬೇಕು’ ಎಂದರು.

ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವಗೌಡಪ್ಪ, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಸ್.ಪಿ.ಮಧು, ಡಾ.ಪ್ರತಿಭಾ ಪೆರೇರಾ, ಡಾ.ಕ್ಷಮಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.