ಮೈಸೂರು: ‘ಬಿಜೆಪಿಗೆ ಮೋದಿ ಎಂದರೆ ದೇವರು. ಅವರ ಹೆಸರಿನಲ್ಲೇ ಮೈಸೂರಿನಿಂದ ಕಳೆದ ಎರಡು ಚುನಾವಣೆ ಗೆದ್ದಿದ್ದು, ಈ ಬಾರಿಯೂ ಟಿಕೆಟ್ ಸಿಕ್ಕೇ ಸಿಗುತ್ತದೆ’ ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ 2014ಕ್ಕೆ ಮುನ್ನ ಕೇವಲ ಒಬ್ಬ ಪತ್ರಕರ್ತನಾಗಿದ್ದೆ. ಪಕ್ಷ ಹಾಗೂ ಸಂಘದ ಆಶೀರ್ವಾದದಿಂದ ಅವಕಾಶ ಸಿಕ್ಕು ಎರಡು ಬಾರಿ ಸಂಸದನಾದೆ. ಕಳೆದ ಹತ್ತು ವರ್ಷಗಳಲ್ಲಿ ಮೈಸೂರನ್ನು ಬಿಜೆಪಿಗೆ ಗೆಲ್ಲುವ ನೆಲವನ್ನಾಗಿ ಮಾಡಿದ್ದೇನೆ. ಕಾಂಗ್ರೆಸ್ ನಾಯಕರು ಇಲ್ಲಿ ಸೋಲುವ ಟಿಕೆಟ್ಗಾಗಿಯೇ ಹೊಡೆದಾಟ ಮಾಡುತ್ತಿದ್ದಾರೆ. ಹೀಗಿರುವಾಗ ಬಿಜೆಪಿಯಲ್ಲಿ ಗೆಲ್ಲುವ ಟಿಕೆಟ್ಗೆ ಪೈಪೋಟಿ ಇರುವುದಿಲ್ಲವೇ?’ ಎಂದು ಪ್ರಶ್ನಿಸಿದರು.

‘ರಾಷ್ಟ್ರ ಮತ್ತು ರಾಜ್ಯ ನಾಯಕರು, ಸಂಘ ನಾಯಕರು ಸಂಸದನಾಗಿ ನಾನು ಮಾಡಿರುವ ಕೆಲಸವನ್ನು ಪರಾಮರ್ಶೆ ಮಾಡಲಿದ್ದಾರೆ. ಮೋದಿ ಬಗ್ಗೆ ಪುಸ್ತಕವನ್ನೂ ಬರೆದಿದ್ದೆ. ಅವರಿಗೆ ನಾನು ಏನೆಂಬುದು ಗೊತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.