ಮೈಸೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ವಾಂಸ ಡಾ.ರಾ.ಸತ್ಯನಾರಾಯಣ (93) ಅವರು ಗುರುವಾರ ರಾತ್ರಿ ಇಲ್ಲಿನ ಜಯನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಇವರಿಗೆ ಪುತ್ರ ರಾ.ಸ.ನಂದಕುಮಾರ್ ಹಾಗೂ ಪುತ್ರಿ ರೋಹಿಣಿ ಸುಬ್ಬರತ್ನಂ ಇದ್ದಾರೆ.

ನಿವಾಸದಲ್ಲಿ ಶುಕ್ರವಾರ ಮಧ್ಯಾಹ್ನ 1.30ರವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4.30ಕ್ಕೆ ಅಂತ್ಯಸಂಸ್ಕಾರವು ಮೈಸೂರು– ಬೆಂಗಳೂರು ರಸ್ತೆಯ ಕೆಂಗಲ್ ಗ್ರಾಮದ ಬಳಿಯ ‘ರಸ ಋಷಿ’ ಆಶ್ರಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇವರು ತಮ್ಮ ಅಂತಿಮ ಕ್ಷಣದವರೆಗೂ ‘ಸಂಗೀತ ಸುಧಾಕರ’ ಎಂಬ ಪುಸ್ತಕ ರಚನೆಯಲ್ಲಿ ತೊಡಗಿದ್ದರು. ‘ಇನ್ನು ನನ್ನ ಕೈಯಲ್ಲಿ ಆಗುವುದಿಲ್ಲ. ಈ ಕೆಲಸವನ್ನು ಮುಂದುವರಿಸು ಎಂದು ನನಗೆ ಹೇಳಿದ್ದರು’ ಎಂದು ಪುತ್ರ ರಾ.ಸ.ನಂದಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಯಚಾಮರಾಜ ಒಡೆಯರ್ ಅವರ ಆಸ್ಥಾನದಲ್ಲಿ ಸಂಗೀತ ವಿದ್ವಾಂಸರಾಗಿದ್ದ ರಾಮಯ್ಯ ಅವರ ಪುತ್ರರಾದ ಇವರು ಸಂತ ತ್ಯಾಗರಾಜ ಸಂಗೀತ ಪರಂಪರೆಯನ್ನು ಮುಂದುವರಿಸಿದವರು. ಇವರಿಗೆ ಕಾಶಿ ವಿಶ್ವವಿದ್ಯಾಲಯದಿಂದ ಮಹೋಪಧ್ಯಾಯ, ರಾಜ್ಯ ಸಂಗೀತ ವಿದ್ವಾನ್, ಸಂಗೀತ ನಾಟಕ ಅಕಾಡೆಮಿ ರತ್ನ, ವೀಣೆ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದವು.

ಇವರ ಶಿಷ್ಯರು ಜರ್ಮನಿ, ಇಟಲಿ ಸೇರಿದಂತೆ ಪ್ರಪಂಚದ ನಾನಾ ಭಾಗಗಳಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.