ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಕಾರಣದಿಂದಾಗಿ ಅ.5 ಹಾಗೂ 6ರಂದು ಆನ್ಲೈನ್ ಸೇವೆಗಳು ಲಭ್ಯ ಇರುವುದಿಲ್ಲ.

ಐಟಿ ವ್ಯವಸ್ಥೆ ಉನ್ನತೀಕರಣದಿಂದ ಹೊಸ ಸಂರ್ಪಕ ಪ್ರಕ್ರಿಯೆ, ಹೆಸರು ಮತ್ತು ಸುಂಕ ಬದಲಾವಣೆ, ಹೆಸರು ವರ್ಗಾವಣೆ ಮತ್ತು ತಾತ್ಕಾಲಿಕ ಸಂಪರ್ಕಗಳಂತಹ ಕಾರ್ಯಾಚರಣೆಗಳಿಗೆ ಆರ್ಎಪಿಡಿಆರ್ಪಿ ಅಪ್ಲಿಕೇಷನ್ ಲಭ್ಯವಿರುವುದಿಲ್ಲ. ಹಾಗೆಯೇ ಸೆಸ್ಕ್ ನಗದು ಪಾವತಿ, ಹೊಸ ಸಂಪರ್ಕಗಳು, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಸೇವೆಗಳಿಗಾಗಿ ಗ್ರಾಹಕರ ಪೋರ್ಟಲ್ ಕಾರ್ಯನಿರ್ವಹಿಸುವುದಿಲ್ಲ. ಆರ್ಎಪಿಡಿಆರ್ಪಿ ಸೇವೆ ಇಲ್ಲದ ಕಾರಣ ಮೊಬೈಲ್ ಅಪ್ಲಿಕೇಷನ್ಗಳೂ ಲಭ್ಯವಿರುವುದಿಲ್ಲ.

ಸೆಸ್ಕ್ ವ್ಯಾಪ್ತಿಯ ಮೈಸೂರು, ಮಳವಳ್ಳಿ, ನಂಜನಗೂಡು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ.ಆರ್ ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೇಗಾಲ, ಹಾಸನ ಹಾಗೂ ಚನ್ನರಾಯನಪಟ್ಟಣ ವ್ಯಾಪ್ತಿಯ ಗ್ರಾಹಕರಿಗೆ ಆನ್ಲೈನ್ ಸೇವೆಗಳು ದೊರೆಯುವುದಿಲ್ಲ.

ಅ.4ರ ರಾತ್ರಿ 9ರಿಂದ ಅ.5ರ ಬೆಳಿಗ್ಗೆ 11ರವರೆಗೆ ಆನ್ಲೈನ್ ಬಿಲ್ ಪಾವತಿ ಸ್ಥಗಿತಗೊಳ್ಳಲಿದೆ. ಅ.5ರ ಬೆಳಿಗ್ಗೆ 11ರ ನಂತರ ಬಿಲ್ ಪಾವತಿ ಪುನರಾರಂಭವಾಗಲಿದೆ. ಉಳಿದಂತೆ ಎಲ್ಲ ಸೇವೆಗಳು ಅ.7ರ ಬೆಳಿಗ್ಗೆ 6ರಿಂದ ಪುನರಾರಂಭವಾಗಲಿವೆ. ತಂತ್ರಾಂಶವು ಕಾರ್ಯಾರಂಭಗೊಂಡ ನಂತರ ಸ್ಥಿರಗೊಳ್ಳಲು 15 ದಿನಗಳ ಕಾಲಾವಕಾಶ ಬೇಕಾಗುತ್ತದೆ. ಈ ಸಮಯದಲ್ಲಿ ತಂತ್ರಾಂಶದ ಕಾರ್ಯಕ್ಷಮತೆಯಲ್ಲಿ ಸ್ವಲ್ಪಮಟ್ಟದ ವ್ಯತ್ಯಯ ಉಂಟಾಗಬಹುದು. ಗ್ರಾಹಕರು ಸಹಕರಿಸಬೇಕು ಎಂದು ಸೆಸ್ಕ್ ಪ್ರಕಟಣೆಯಲ್ಲಿ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.