ಸತೀಶ್ ಬಿ.ಆರಾಧ್ಯ

ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ವಲಯದ ತಾರಕ ಜಲಾಶಯದ ಹಿನ್ನೀರು ಪ್ರದೇಶದ ರಸೂಲೈನ್ ಸಮೀಪ ಬುಧವಾರ ಬೆಳಿಗ್ಗೆ ಸಫಾರಿಯಲ್ಲಿ ಜಿಂಕೆಗಳ ಹಿಂಡಿನ ನಡುವೆ ಬಿಳಿ ಬಣ್ಣದ ಜಿಂಕೆ ಕಾಣಿಸಿಕೊಂಡಿತು. ಮಂಗಳವಾರ ಇದೇ ವಲಯದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿತ್ತು.

‘ಈ ಜಿಂಕೆ ಮೆಲನಿನ್ (ವರ್ಣದ್ರವ್ಯ) ಹೆಚ್ಚಾಗಿ ಬಿಳಿ ಬಣ್ಣದೊಂದಿಗೆ ಹುಟ್ಟಿದೆ. ಇಂಥ ಪ್ರಾಣಿಗಳು ಕಾಡಿನಲ್ಲಿ ಬದುಕುವುದು ಕಷ್ಟ. ಮಾಂಸಾಹಾರಿ ಪ್ರಾಣಿಗಳಿಗೆ ಬಹಳ ಸುಲಭವಾಗಿ ತುತ್ತಾಗುವ ಸಾಧ್ಯತೆ ಹೆಚ್ಚು’ ಎಂದು ವನ್ಯಜೀವಿ ಛಾಯಾಗ್ರಾಹಕರಾದ ವಿನಯ್ ಮತ್ತು ಉಲ್ಲಾಸ್ ಶ್ಯಾನಭೋಗ್ ಹೇಳಿದರು.

‘ಮೆಲನಿನ್ ಕಡಿಮೆಯಾಗಿ ಕಪ್ಪಾಗಿ ಹುಟ್ಟುವ ಪ್ರಾಣಿಗಳಿಗೆ ಕಾಡಿನಲ್ಲಿ ಬದುಕುವುದು ಸಲೀಸು. ಬೇಟೆಯಾಡುವ ಪ್ರಾಣಿಯಾದರಂತೂ ರಾತ್ರಿ ವೇಳೆ ಬೇಟೆಗೆ ಹೆಚ್ಚು ಅನುಕೂಲವಾಗುತ್ತದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.