ಮೈಸೂರು: ‘ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಜೂನ್ 5ರಂದು ಪ್ರಕಟವಾದ ರಾಷ್ಟ್ರಮಟ್ಟದ ಎನ್ಐಆರ್‌ಎಫ್ ರ‍್ಯಾಂಕ್‌ನಲ್ಲಿ 151ರಿಂದ 200ರ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಸತತ 5 ವರ್ಷಗಳಿಂದ ಸ್ಥಿರತೆ ಕಾಯ್ದುಕೊಂಡಿದೆ’ ಎಂದು ಕಾಲೇಜು ಪ್ರಾಂಶುಪಾಲ ಡಾ.ಆರ್.ಎಂ.ಮಹಾಲಿಂಗೇಗೌಡ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇದು ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ ಬೆಂಬಲಿತ ರ‌್ಯಾಂಕಿಂಗ್ ಆಗಿದೆ. ಕಳೆದ 5 ವರ್ಷಗಳಿಂದ 200ರೊಳಗೆ ರ‌್ಯಾಂಕ್ ಪಡೆಯುತ್ತಿದ್ದೇವೆ. ಎನ್ಐಆರ್‌ಎಫ್ ಇನೋವೇಶನ್ ರ‌್ಯಾಂಕಿಂಗ್‌ನಲ್ಲಿಯೂ 11ರಿಂದ 50ರ ಗುಂಪಿನಲ್ಲಿ ಸ್ಥಾನ ಪಡೆಯಲಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ದೇಶದಾದ್ಯಂತ 2,600 ಎಂಜಿನಿಯರಿಂಗ್ ಕಾಲೇಜುಗಳು ಈ ರ‌್ಯಾಂಕಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು. ನಮ್ಮಲ್ಲಿನ ಮೂಲಸೌಲಭ್ಯ, ಶಿಕ್ಷಣ, ಸಂಶೋಧನೆ ಮತ್ತು ವೃತ್ತಿಪರತೆಯನ್ನು ಆಧರಿಸಿ ರ‍್ಯಾಂಕ್ ನೀಡಲಾಗಿದೆ. ನಮಗೆ ದೊರೆತಿರುವ ಈ ಸ್ಥಾನವೂ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕ್ಯಾಂಪಸ್‌ನಲ್ಲಿನ ಉದ್ಯೋಗಾವಕಾಶವನ್ನೂ ಹೆಚ್ಚಿಸಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಡೀನ್ ಡಾ.ಆರ್.ಗಿರೀಶ್, ಅಕಾಡೆಮಿ ಉಪ ಡೀನ್ ಡಾ.ಡಿ.ಆರ್.ಉಮೇಶ್, ಪ್ಲೇಸ್‌ಮೆಂಟ್ ಅಧಿಕಾರಿ ಡಾ.ಎಸ್.ವಿನಯ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಮಹೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.