ಮೈಸೂರು: ಗ್ರಾಹಕರ ಪಾಲಿಗೆ ಈರುಳ್ಳಿ–ಬೆಳ್ಳುಳ್ಳಿ ದುಬಾರಿಯಾಗಿಯೇ ಮುಂದುವರಿದಿದ್ದು, ಈ ವಾರ ತರಕಾರಿಗಳ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ.

ಮಾರುಕಟ್ಟೆಗೆ ಸಣ್ಣ ಗಾತ್ರದ ಹೊಸ ಈರುಳ್ಳಿ ಕಾಲಿಟ್ಟಿದೆಯಾದರೂ ಗುಣಮಟ್ಟ ಅಷ್ಟು ಉತ್ತಮವಾಗಿಲ್ಲ. ಬೇಗನೆ ಕೊಳೆತು ಹೋಗುತ್ತಿರುವುದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಬೆಲೆಯೂ ಕಡಿಮೆ ಆಗಿಲ್ಲ. ಹಳೇ ಈರುಳ್ಳಿ ಬೇಡಿಕೆ ಉಳಿಸಿಕೊಂಡಿದ್ದು, ಬೆಲೆಯೂ ಹೆಚ್ಚಿದೆ. ಬೆಳ್ಳುಳ್ಳಿ ಎಂದಿನಂತೆ ದುಬಾರಿ ಆಗಿಯೇ ಇದ್ದು, ಕೇವಲ 250 ಗ್ರಾಂಗೆ ₹100ರ ಸರಾಸರಿಯಲ್ಲಿ ಮಾರಾಟ ನಡೆದಿದೆ. ಇದರಿಂದಾಗಿ ಗ್ರಾಹಕರು ಗ್ರಾಂ ಲೆಕ್ಕದಲ್ಲೇ ಖರೀದಿ ನಡೆಸುತ್ತಿದ್ದಾರೆ.

ಬೀನ್ಸ್ ಸೇರಿದಂತೆ ಕೆಲವು ತರಕಾರಿಗಳು ಅಗ್ಗವಾಗಿವೆ. ಮಾರುಕಟ್ಟೆಗೆ ಗುಣಮಟ್ಟದ ಬೀನ್ಸ್ ಬರುತ್ತಿದೆ. ಬೆಂಡೆ, ಬದನೆ, ಈರೇಕಾಯಿ, ಹಾಗಲ ಸೇರಿದಂತೆ ಬಹುತೇಕ ತರಕಾರಿಗಳು ಕೈಗೆ ಎಟಕುವ ದರದಲ್ಲಿವೆ. ಟೊಮೆಟೊ ಧಾರಣೆ ಇಳಿಮುಖವಾಗಿದ್ದು, ಗುಣಮಟ್ಟದ ಹಣ್ಣು ಪ್ರತಿ ಕೆ.ಜಿ.ಗೆ ₹20ಕ್ಕೆ ಸಿಗುತ್ತಿದೆ.

ಸೊಪ್ಪು ಯಥಾಸ್ಥಿತಿ: ಸೊಪ್ಪಿನ ಬೆಲೆಯಲ್ಲಿ ಈ ವಾರ ಹೆಚ್ಚು ವ್ಯತ್ಯಾಸ ಆಗಿಲ್ಲ. ಕೊತ್ತಂಬರಿ ಸಣ್ಣ ಕಟ್ಟು ₹5, ಮೆಂತ್ಯ ₹20–30, ಸಬ್ಬಸ್ಸಿಗೆ ₹10, ಪಾಲಕ್–ಪುದೀನ ₹10, ಕೀರೆ–ಕಿಲ್ಕೀರೆ, ದಂಟು ₹10ಕ್ಕೆ 2ರಂತೆ ಮಾರಾಟ ನಡೆದಿದೆ.

ಚಿಕನ್ ಅಗ್ಗ: ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಕೋಳಿಮಾಂಸದ ಬೆಲೆಯು ಪ್ರತಿ ಕೆ.ಜಿ.ಗೆ ₹20 ಬೆಲೆ ಇಳಿಸಿಕೊಂಡಿದೆ. ರೆಡಿ ಚಿಕನ್ ಕೆ.ಜಿ.ಗೆ ₹200ರಂತೆ ಹಾಗೂ ಚರ್ಮರಹಿತ ಕೋಳಿಮಾಂಸ ₹240ರಂತೆ ವ್ಯಾಪಾರ ನಡೆದಿದೆ. ಕುರಿ–ಮೇಕೆ ಮಾಂಸದ ಬೆಲೆಯಲ್ಲಿ ವ್ಯತ್ಯಾಸ ಆಗಿಲ್ಲ.

ಸಮುದ್ರ ಮೀನುಗಳು ದುಬಾರಿಯಾಗಿಯೇ ಉಳಿದಿವೆ. ಬಂಗುಡೆ–₹260, ಅಂಜಲ್ ₹900, ಬಿಳಿಮಾಂಜಿ–₹800, ಸಾಲ್ಮನ್ ₹600, ಭೂತಾಯಿ ₹200, ಸೀಗಡಿ ₹400 ರಂತೆ ವ್ಯಾಪಾರ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.