ಮೈಸೂರು: ‘ಕಾವೇರಿ ನದಿ ನೀರು ವಿಷಯದಲ್ಲಿ ನಾಡಿನ ಪರವಾಗಿ ಹೋರಾಟಕ್ಕೆ ಸಿದ್ಧವಿದ್ದೇವೆ’ ಎಂದು ಚಲನಚಿತ್ರ ನಟ ರಾಘವೇಂದ್ರ ರಾಜಕುಮಾರ್ ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ರೂಪರೇಷೆ ಸಿದ್ಧಪಡಿಸುತ್ತಾರೆ. ಅವರ ಕರೆಗಾಗಿ ಕಾಯುತ್ತಿದ್ದೇವೆ. ಕಲಾವಿದರಾದ ನಾವು ಇರುವುದು ಕೇವಲ ಚಲನಚಿತ್ರ ಮಾಡಲು ಹಾಗೂ ಪ್ರದರ್ಶಿಸುವುದಕ್ಕಷ್ಟೇ ಅಲ್ಲ. ನಾಡಿನ ನೆಲ, ಜಲ, ಭಾಷೆಗೆ ಕಷ್ಟ ಬಂದಾಗ ಹೋರಾಟಕ್ಕೆ ಬರಲೇಬೇಕು’ ಎಂದು ತಿಳಿಸಿದರು.

‘ನಾಡು, ನೆಲ, ಜಲಕ್ಕಾಗಿ ಪ್ರಾಣ ಕೊಡಲು ಸಿದ್ಧ ಎಂದು ತಂದೆ ರಾಜಕುಮಾರ್ ಹೇಳಿದ್ದರು. ಮುಂದಿನ ದಿನಗಳಲ್ಲಿ ನಮ್ಮ ಇಡೀ ಕುಟುಂಬ ಹಾಗೂ ಚಿತ್ರರಂಗ ರೈತರ ಪರವಾಗಿ ನಿಲ್ಲಲಿದೆ. ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳುವುದು ನಮ್ಮ ಧರ್ಮ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.