ಮೈಸೂರು: ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ‘ವಂಶವೃಕ್ಷ’ ಕೃತಿಯನ್ನು ಅನಧಿಕೃತವಾಗಿ ತೆಲುಗು ಭಾಷೆಗೆ ಅನುವಾದ ಮಾಡಿ ಪ್ರಕಟಿಸಿ ಕಾಪಿರೈಟ್ ಉಲ್ಲಂಘಿಸಿದ್ದ ಹೈದರಾಬಾದ್‌ನ ‘ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನ’ದ ವತ್ಸಲಾ ಅವರು ₹5.05 ಲಕ್ಷ ನಷ್ಟ ಪರಿಹಾರ ನೀಡುವಂತೆ ನಿರ್ದೇಶಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಡಿ.21ರಂದು ತೀರ್ಪು ನೀಡಿದೆ.

ಭೈರಪ್ಪ ಅವರು ‘ವಂಶವೃಕ್ಷ’ವನ್ನು ತೆಲುಗು ಭಾಷೆಗೆ ಅನುವಾದಿಸುವ ಹಕ್ಕನ್ನು ಸನಗರಂ ನಾಗಭೂಷಣಂ ಎಂಬವರಿಗೆ ನೀಡಿದ್ದರು. ಅವರು ‘ವಂಶವೃಕ್ಷಂ’ ಎಂಬ ಹೆಸರಿನಲ್ಲಿ ತೆಲುಗಿಗೆ ಅನುವಾದಿಸಿದ್ದರು. ಕೆಲವು ವರ್ಷಗಳ ಹಿಂದೆ ನಿಧನರಾದರು. ಭೈರಪ್ಪ ಅವರು ತೆಲುಗಿಗೆ ಅನುವಾದಿಸಲು ನಾಗಭೂಷಣಂ ಬಿಟ್ಟು ಬೇರಾರಿಗೂ ಅನುಮತಿ ನೀಡಿರಲಿಲ್ಲ.

ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನದ ಸಂಪಾದಕಿ ವತ್ಸಲಾ ಅವರು ‘ವಂಶವೃಕ್ಷಂ’ ಅನುವಾದಿತ ಕೃತಿಯನ್ನು ಹೊಸದಾಗಿ ಪ್ರಕಟಿಸಿದ್ದಾರೆಂಬ ಮಾಹಿತಿಯು ಭೈರಪ್ಪ ಅವರಿಗೆ 2021ರ ನವೆಂಬರ್‌ನಲ್ಲಿ ತಿಳಿಯಿತು. ಆ ಕೃತಿ ಅವಲೋಕಿಸಿದಾಗ ‘ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ’ ಎಂಬ ಘೋಷಣೆಯೂ ಇರುವುದು ಗಮನಕ್ಕೆ ಬಂದಿತ್ತು. ತೆಲುಗಿಗೆ ಅನುವಾದಿಸಿ ಮರುಮುದ್ರಿಸುವ ಹಕ್ಕನ್ನು ವತ್ಸಲಾ ಅವರಿಗೆ ಭೈರಪ್ಪ ಅವರು ನೀಡಿರಲಿಲ್ಲ. ಈ ಮೂಲಕ, ವತ್ಸಲಾ ಕಾಪಿರೈಟ್ ಕಾಯ್ದೆ ಉಲ್ಲಂಘಿಸಿದ್ದರು. ಸಾವಿರ ಪ್ರತಿಯನ್ನು ಅನಧಿಕೃತವಾಗಿ ಮುದ್ರಿಸಿ, ಆ ಪುಸ್ತಕಕ್ಕೆ ₹360 ದರ ನಿಗದಿಪಡಿಸಿದ್ದರು.

ಈ ವಿಚಾರ ತಿಳಿದ ಭೈರಪ್ಪ 2021ರ ನ.15ರಂದು ತಮ್ಮ ವಕೀಲರ ಮೂಲಕ ನೋಟಿಸ್ ನೀಡಿ, ಅನಧಿಕೃತವಾಗಿ ಪ್ರಕಟಿಸಿದ ‘ವಂಶವೃಕ್ಷಂ’ ಕಾದಂಬರಿಯ ಪ್ರತಿಗಳನ್ನು ಮಾರದಂತೆ ಹಾಗೂ ಮುದ್ರಿತ ಪ್ರತಿಗಳನ್ನು ತಮಗೆ ಒಪ್ಪಿಸುವಂತೆ ವತ್ಸಲಾ ಅವರಿಗೆ ಸೂಚಿಸಿದ್ದರು. ಕಾನೂನುಬಾಹಿರ ಕೃತ್ಯ ಎಸಗಿದ್ದಕ್ಕಾಗಿ ₹5 ಲಕ್ಷ ನೀಡುವಂತೆಯೂ ತಿಳಿಸಿದ್ದರು. ಇದಕ್ಕೆ ವತ್ಸಲಾ ಸ್ಪಂದಿಸಿರಲಿಲ್ಲ. ಆದ್ದರಿಂದ ₹5.05 ಲಕ್ಷ ನಷ್ಟ ಪರಿಹಾರ ಕೊಡಿಸುವಂತೆ ಕೋರಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಪ್ರಕರಣದಲ್ಲಿ ಕೋರ್ಟ್ ಕಮಿಷನರ್ ಪಿ.ಜೆ.ರಾಘವೇಂದ್ರ ಅವರು ಭೈರಪ್ಪ ಮನೆಗೆ ಡಿ.6ರಂದು ತೆರಳಿ ಸಾಕ್ಷ್ಯ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದರು.

ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್ ಅವರು, ತೀರ್ಪು ನೀಡಿದ್ದಾರೆ.

ಭೈರಪ್ಪ ಪರವಾಗಿ ವಕೀಲ ಓ.ಶ್ಯಾಮ್ ಭಟ್ ವಕಾಲತ್ತು ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.