ಮೈಸೂರು: ನೈರುತ್ಯ ರೈಲ್ವೆ ಮೈಸೂರು ವಿಭಾಗವು ಈ ವರ್ಷ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಒಟ್ಟು 7.242 ದಶಲಕ್ಷ ಟನ್ ಸರಕು ಸಾಗಣೆ ಮಾಡಿ ದಾಖಲೆ ಸೃಷ್ಟಿಸಿದೆ.

ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ 1.700 ಟನ್ ಗಣನೀಯ ಹೆಚ್ಚಳವಾಗಿದೆ.

‘ವಿಭಾಗವು ಸರಕು ಸಾಗಣೆಯಲ್ಲಿ ಗಣನೀಯ ಬೆಳವಣಿಗೆ ಕಂಡಿದೆ. ಅಂದರೆ, ಶೇ 30.68 ಹೆಚ್ಚಳ ದಾಖಲಿಸಿದೆ’ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್‌ವಾಲ್ ತಿಳಿಸಿದ್ದಾರೆ. ‘ಈ ಅತ್ಯುತ್ತಮ ಕಾರ್ಯಕ್ಷಮತೆ ತೃಪ್ತಿಕರವಾಗಿದೆ. ಈ ಸಾಧನೆಯು ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಗ್ರಾಹಕರ ತೃಪ್ತಿಯ ಕಡೆಗೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಇದನ್ನು ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ.

‘ವಿಭಾಗವು ಏಪ್ರಿಲ್‌ನಿಂದ ನವೆಂಬರ್‌ವರೆಗೆ ಸರಕು ಸಾಗಣೆಯಿಂದ ₹ 620.20 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹ 171.54 ಕೋಟಿ ಹೆಚ್ಚಳವಾಗಿದ್ದು, ದೃಢವಾದ ಆರ್ಥಿಕ ಪ್ರಗತಿಯನ್ನು ತೋರಿಸುತ್ತದೆ’ ಎಂದು ತಿಳಿಸಿದ್ದಾರೆ.

‘ನವೆಂಬರ್‌ನಲ್ಲಿ ವಿಭಾಗವು 1.029 ಟನ್ ಸರಕು ಸಾಗಣೆ ಮಾಡಿದೆ. ಹೋದ ವರ್ಷಕ್ಕಿಂತ ಶೇ 53.13ರಷ್ಟು ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಇದರಿಂದ ₹ 79.88 ಕೋಟಿ ಆದಾಯ ಬಂದಿದೆ. 2022ರ ನವೆಂಬರ್‌ಗೆ ಹೋಲಿಸಿದರೆ ಶೇ 29.68ರಷ್ಟು ಪ್ರಗತಿಯಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ವಿಭಾಗದಲ್ಲಿ ನವೆಂಬರ್‌ನಲ್ಲಿ ವಿವಿಧ ರೀತಿಯ ಸರಕುಗಳ ಸಾಗಣೆ ನಡೆದಿದೆ. ಕಬ್ಬಿಣದ ಅದಿರು 0.830 ಟನ್, ಖನಿಜ ತೈಲದಲ್ಲಿ 0.163 ಟನ್, ಆಹಾರ ಧಾನ್ಯಗಳಲ್ಲಿ 0.003 ಟನ್, ಆಟೊಮೊಬೈಲ್ ವಿಭಾಗದಲ್ಲಿ 0.006 ಟನ್ ಮತ್ತು ಇತರ 0.033 ಟನ್ ಸರಕು ಸಾಗಣೆ ಮಾಡಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.