ಮೈಸೂರು: ‘ವ್ಯಕ್ತಿಯ ಸಮಗ್ರ ಅಭಿವೃದ್ಧಿಯಲ್ಲಿ ಕ್ರೀಡೆಯು ಪ್ರಮುಖ ಪಾತ್ರವಹಿಸುತ್ತದೆ. ನಮ್ಮಲ್ಲಿ ಶಿಸ್ತು, ಸಹನೆಯ ಮೌಲ್ಯಗಳ ಹೆಚ್ಚಳಕ್ಕೆ ಒತ್ತು ನೀಡುತ್ತದೆ’ ಎಂದು ಡೆಲ್ಲಿ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಮಂಜು ಶರ್ಮಾ ಹೇಳಿದರು.

ಇಲ್ಲಿನ ಡೆಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಈಚೆಗೆ ನಡೆದ ‘ಸ್ಪೋರ್ಟೋಪಿಯಾ– 2024’ ಕ್ರೀಡಾ ಚಟುವಟಿಕೆಯ ಆಶಯ ಭಾಷಣ ಮಾಡಿದ ಅವರು, ‘ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಇಂತಹ ಚಟುವಟಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಅಂತರರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಬ್ಯಾಡ್ಮಿಂಟನ್ ಚಾಂಪಿಯನ್ ಕೆ.ಎಂ.ಪಲ್ಲವಿ ಹಾಗೂ ಅಂತರರಾಷ್ಟ್ರೀಯ ಯೋಗಪಟು ಖುಷಿ ಅತಿಥಿಗಳಾಗಿ ಭಾಗವಹಿಸಿ, ‘ಕ್ರೀಡೆ ವ್ಯಕ್ತಿತ್ವ ಹೊರಹೊಮ್ಮುವಿಕೆಗೆ ಸಹಕಾರಿ’ ಎಂಬ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

ಸ್ಪೋರ್ಟ್ಸ್ ಕ್ಯಾಪ್ಟನ್ ಕ್ರಿಸ್ ಆಡಮ್ ಕ್ರೀಡಾ ಚಟುವಟಿಕೆಗಳನ್ನು ನಿರ್ವಹಿಸಿದರು. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗಮನಾರ್ಹ ಕೌಶಲ, ಸಮನ್ವಯ ಮತ್ತು ಕಲಾತ್ಮಕತೆಯನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ರಾಜ್ಯದ ವಿವಿಧ ಕಲೆಗಳ ಪ್ರದರ್ಶನವೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.