ಹುಣಸೂರು: ನಕ್ಷತ್ರ ಆಮೆಗಳನ್ನು ಸೂಟ್ಕೇಸ್ನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಸುಲ್ತಾನ್ ಬತೇರಿ ನಿವಾಸಿಗಳಾದ ರಿಯಾಜ್ ಮತ್ತು ನಾಸೀರ್ ಬಂಧಿತರು.

ತಾಲ್ಲೂಕಿನ ಕಲ್ಲಬೆಟ್ಟ ಕ್ರಾಸ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಮಾರುತಿ ಕಾರಿನಲ್ಲಿ ಬಂದ ಆರೋಪಿಗಳು ಇದನ್ನು ಕಂಡು ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಹೊರಟಿದ್ದಾರೆ. ಇದರಿಂದ ಅನುಮಾನಗೊಂಡ ಸರ್ಕಲ್ ಇನ್ಸ್ಪೆಕ್ಟರ್ ಪೂವಯ್ಯ ಕಾರು ಬೆನ್ನತ್ತಿ, ಹಿಡಿದು ಪರಿಶೀಲನೆ ನಡೆಸಿದಾಗ ಸೂಟ್ಕೇಸ್ನಲ್ಲಿದ್ದ 3 ನಕ್ಷತ್ರ ಆಮೆಗಳು ಪತ್ತೆಯಾದವು.

ನಕ್ಷತ್ರ ಆಮೆಗಳಿಗೆ ಗುಜರಾತ್ನಲ್ಲಿ ಭಾರಿ ಬೇಡಿಕೆ ಇದೆ. ಇವುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಸಿರಿವಂತರಾಗಬಹುದು ಎಂಬ ನಂಬಿಕೆ ಇದೆ. ಹೀಗಾಗಿ, ಆರೋಪಿಗಳು ಅವುಗಳನ್ನು ಹಿಡಿದು, ಮಾರಾಟ ಮಾಡಲು ಸಾಗಣೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.