ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಹೂಟಗಳ್ಳಿ ಸರ್ಕಾರಿ ಪ್ರೌಢ ಶಾಲೆ ಮತಗಟ್ಟೆಗೆ ಮತ ಚಲಾಯಿಸಲು ಬಂದಿದ್ದ ವ್ಯಕ್ತಿ ಇವಿಎಂ– ಕಂಟ್ರೋಲ್ ಯೂನಿಟ್ ಒಡೆದು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಹರಿದಾಡಿದೆ.

ಹೂಟಗಳ್ಳಿ ನಿವಾಸಿ ಶಿವಮೂರ್ತಿ ಎಂಬುವರು ಮೇ 10ರ ಬುಧವಾರ ಸಂಜೆ 4.15ರ ಸುಮಾರು ಮತ ಚಲಾಯಿಸಲು ಬಂದಿದ್ದರು. ಗುರುತಿನ ಚೀಟಿ ಸಿಬ್ಬಂದಿಗೆ ನೀಡಿದ ನಂತರ ಏಕಾಏಕಿ ವಿದ್ಯುನ್ಮಾನ ಮತಯಂತ್ರದ ಕಂಟ್ರೋಲ್ ಯೂನಿಟ್ ಅನ್ನು ಎರಡು ಬಾರಿ ನೆಲಕ್ಕೆ ಹಾಕಿ ಒಡೆದಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರು.

ಮತಗಟ್ಟೆ ಅಧಿಕಾರಿ ಎಂ.ಜಿ.ಕುಮಾರ ಅವರು ನೀಡಿದ ದೂರಿನ ಮೇಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮತಗಟ್ಟೆಯಲ್ಲಿ 912 ಮತದಾರರು ಇದ್ದು, ಆ ವೇಳೆ 553 ಮಂದಿ ಮತ ಚಲಾಯಿಸಿದ್ದರು. ಹೊಸ ಕಂಟ್ರೋಲ್ ಯೂನಿಟ್ ಅಳವಡಿಸಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು’ ಎಂದು ಚುನಾವಣಾಧಿಕಾರಿ ತಿಳಿಸಿದರು.

‘ಆರೋಪಿಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ತಿಳಿಹೇಳಿದ್ದೆವು. ಅವರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ’ ಎಂದು ವಿಜಯನಗರ ಪೊಲೀಸರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.