ಹನಗೋಡು: ನಾಗರಹೊಳೆ ಕಾಡಂಚಿನ ಗ್ರಾಮಗಳಾದ ನಾಗಪುರ ಹಾಗೂ ಭಾರತವಾಡಿಗಳಲ್ಲಿ ಮೂರು ದಿನಗಳಿಂದ ಕಾಡಾನೆ ಹಿಂಡು ಬೀಡು ಬಿಟ್ಟಿದ್ದು ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ.

ಗುರುವಾರ ಬೆಳಿಗ್ಗೆಯಿಂದ ಭಾರತವಾಡಿ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಹಾಗೂ ಶಶಿಕಲಾ ರಾಮಣ್ಣ ಮತ್ತು ಇಂದ್ರೇಶ್ ಜಮೀನುಗಳಲ್ಲಿ ಐದು ಆನೆಗಳು ಬೀಡು ಬಿಟ್ಟು ಜೋಳ, ತೆಂಗಿನ ಗಿಡ, ಬಾಳೆ ಬೆಳೆ ಹಾಗೂ ನೀರಾವರಿಗೆ ಬಳಸಿದ್ದ ಪೈಪ್ ತುಳಿದು ನಾಶ ಮಾಡಿವೆ.

ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಓಡಿಸಲು ಹರಸಾಹಸ ಪಟ್ಟರೂ ವಿಫಲವಾಯಿತು. ಜೋಳದ ಜಮೀನಿನಲ್ಲಿದ್ದ ಕಾಡಾನೆ ಸಿಡಿಮದ್ದು ಸಿಡಿಸಿದರೂ ಜಿಗ್ಗಲಿಲ್ಲ. ನಂತರ ಜೆಸಿಬಿ ಹಾಗೂ ಟ್ರಾಕ್ಟರ್ ಮೂಲಕ ಓಡಿಸಲು ಪ್ರಯತ್ನಿಸಲಾಯಿತು. ಅದೂ ಫಲ ನೀಡಲಿಲ್ಲ. ನಂತರ ಭಾರತವಾಡಿ ಗ್ರಾಮದ ಒಳ ನುಗ್ಗಿದವು.

ಭೀಮ ಆನೆ ಬಳಕೆ: ಆನೆಗಳನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆಗೆ ದಸರಾದಲ್ಲಿ ಪಾಲ್ಗೊಂಡಿದ್ದ ಭೀಮ ಆನೆಯನ್ನು ಕರೆ ತಂದಿದ್ದು ಆದರೂ ಸಹ ಇಂದು ಆನೆಗಳನ್ನು ಕಾಡಿಗಟ್ಟುವಲ್ಲಿ ಇಲಾಖೆ ವಿಫಲಗೊಂಡಿದ್ದಾರೆ.

ಕಾರ್ಯಚರಣೆ ವೇಳೆ ಮಾತಾಡಿದ ವಲಯ ಅರಣ್ಯ ಅಧಿಕಾರಿ ಅಭಿಷೇಕ್, ‘ಮೇಲಧಿಕಾರಿಗಳ ನಿರ್ದೇಶನದಂತೆ ಕಾರ್ಯಾಚರಣೆ ವೇಳೆ ಎಲ್ಲಾ ಮಾರ್ಗಸೂಚಿಗಳನ್ನು ಅನ್ವಯಿಸಲಾಗುವುದು ಗ್ರಾಮದ ಜನರ ಸಹಕಾರ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.