ಎಚ್.ಡಿ. ಕೋಟೆ (ಮೈಸೂರು): ತಾಲ್ಲೂಕಿನ ಮೂರ್ಬಾಂದ್ ಬೆಟ್ಟದ ಬಳಿ ಮೇಕೆಗಳನ್ನು ಮೇಯಿಸುತ್ತಿದ್ದ ಆದಿವಾಸಿ ಮಹಿಳೆಯನ್ನು ಹುಲಿಯೊಂದು ಶನಿವಾರ ಸಂಜೆ ಕೊಂದು ಹಾಕಿದ್ದು, ಭಾನುವಾರ ಮೃತದೇಹ ಪತ್ತೆಯಾಗಿದೆ.

ತಾಲ್ಲೂಕಿನ ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳದಹಾಡಿಯ ಚಿಕ್ಕಮ್ಮ (48) ಮೃತರು.

ಮಹಿಳೆಯ ಮೇಲೆ ದಾಳಿ ಮಾಡಿದ ಹುಲಿಯು, ಮೃತದೇಹವನ್ನು ಸುಮಾರು 200 ಮೀಟರ್ವರೆಗೆ ಎಳೆದೊಯ್ದಿದೆ. ಅರಣ್ಯ ವೀಕ್ಷಣೆಯ ಟವರ್ ಬಳಿ ಒಂದು ಕಾಲನ್ನು ತಿಂದು ಉಳಿದ ಭಾಗವನ್ನು ಬಿಟ್ಟು ಹೋಗಿದೆ. ಮಹಿಳೆಯೊಂದಿಗೆ ಕುರಿ ಮೇಯಿಸುತ್ತಿದ್ದ ಮತ್ತೊಬ್ಬರು ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದಾಗ ಘಟನೆ ನಡೆದಿರುವುದು ಗೊತ್ತಾಗಿದೆ. ಶನಿವಾರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರಾದರೂ ಕತ್ತಲು ಆವರಿಸಿದ್ದರಿಂದ ಸಿಕ್ಕಿರಲಿಲ್ಲ. ಭಾನುವಾರ ಬೆಳಿಗ್ಗೆ ಪತ್ತೆ ಕಾರ್ಯ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದರು.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿಸಿಎಫ್ ಪ್ರಭಾಕರನ್, ಎಸಿಎಫ್ ರವೀಂದ್ರ, ಆರ್ಎಫ್ಒ ಮಂಜುನಾಥ್ ಬಾಗೇವಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿ, ₹ 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು.
.ನಂಜನಗೂಡು | ದನ ಮೇಯಿಸುವಾಗ ಹುಲಿ ದಾಳಿ; ಮಹಿಳೆ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.