ಜಾಲಹಳ್ಳಿ (ರಾಯಚೂರು): ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಭಾನುವಾರ ಸ್ಥಳೀಯ ಸರ್ಕಾರಿ ಸಮುದಾಯ ವೈದ್ಯಾಧಿಕಾರಿ ಡಾ.ಆರ್.ಎಸ್ ಹುಲಮನಿ ಅವರು ರಾಯಚೂರಿನಿಂದ ಸೈಕ್ಲಿಂಗ್ ಮಾಡಿಕೊಂಡು ಬಂದಿರುವ ತಂಡಕ್ಕೆ ಸ್ವಾಗತಿಸಿ ಬರ ಮಾಡಿಕೊಂಡರು.

ತಂಡದ ನಾಯಕ ವೈದ್ಯ ಬಸವರಾಜ ಪಾಟೀಲ ಮಾತನಾಡಿ, 'ಪ್ರತಿಯೊಬ್ಬ ಮನುಷ್ಯ ಆರೋಗ್ಯವಾಗಿ ಇರಬೇಕಾದರೆ, ದೇಹದಂಡನೆ ಮಾಡಲೇಬೇಕು. ದೇಹದಲ್ಲಿರುವ ಬೆವರು ಬರುವಂತೆ ಕೆಲಸ ಮಾಡಬೇಕು. ಅಗಲೇ ಸಣ್ಣ, ಪುಟ್ಟ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಹೇಳಿದರು.

ರಾಯಚೂರಿನ 16 ಜನ ವೈದ್ಯರ ತಂಡ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಸೈಕ್ಲಿಂಗ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.

ಬೆಳಿಗ್ಗೆ 5 ಗಂಟೆಯಿಂದ ನಮ್ಮ ಪ್ರಯಾಣ ಪ್ರಾರಂಭಗೊಂಡಿದೆ. ಗುರುಗುಂಟಾ ಅಮರೇಶ್ವರ ದೇವಸ್ಥಾನದ ವರೆಗೆ 120 ಕಿ.ಮೀ ಅಂತರವನ್ನು ಕೇವಲ 7 ಗಂಟೆಯಲ್ಲಿ ಪೂರ್ಣಗೊಳಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸೈಕ್ಲಿಂಗ್ ತಂಡದಲ್ಲಿ ವೈದ್ಯರಾದ ಜಯ ಪ್ರಕಾಶ, ಸಕಲೇಶ್, ನಾಗರಾಜ, ಶರಣಗೌಡ, ಮಂಜುನಾಥ, ಸುನೀಲ್, ರಾಘವೇಂದ್ರ, ರವಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.