ದೇವದುರ್ಗ: ಸರ್ಕಾರ ಬರ ಪರಿಹಾರ ಹಾಗೂ ನದಿ ತೀರದ ರೈತರಿಗೆ, ಪ್ರವಾಹದಿಂದಾಗಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಪಾಟೀಲ ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬರಗಾಲಕ್ಕೆ ತುತ್ತಾದ ರೈತರ ಬೆಳೆಗಳನ್ನು ಸಮೀಕ್ಷೆ ನಡೆಸುತ್ತಿಲ್ಲ. ನದಿ ತೀರದ ಪ್ರವಾಹಕ್ಕೆ ಒಳಗಾದ ಜಮೀನುಗಳ ಯಾವುದೇ ಸಮೀಕ್ಷೆ ನಡೆಸುತ್ತಿಲ್ಲ. ರೈತರು ಬೆಳೆಗಳಿಗೆ ಮಾಡಿಸಿದ ಫಸಲ್ ಬಿಮಾ ಯೋಜನೆಯ ವಿಮೆ ಹಣವು ಜಮಾ ಮಾಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ಬಾಕಿ ಉಳಿಸಿಕೊಂಡಿರುವ ಜೋಳ ಖರೀದಿ ಕೇಂದ್ರದ ಶೇ 25ರಷ್ಟು ಹಣ ರೈತರ ಖಾತೆಗೆ ಜಮಾ ಮಾಡಬೇಕು. ತಾಲ್ಲೂಕಿನಲ್ಲಿ ಎನ್ಆರ್ಬಿಸಿಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೈತರಿಗೆ ರಸ್ತೆ ನಿರ್ಮಿಸಬೇಕು. ರೈತರಿಗೆ 7-8 ಗಂಟೆ ತ್ರೀಫೇಸ್ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಹಲವು ರೈತರ ಪಾಣಿಯಲ್ಲಿನ ವಕ್ಫ್ ಬೋರ್ಡ್ ನಮೂದಾಗಿರುವ ಹೆಸರು ತೆಗೆದು ಹಾಕಬೇಕು. ನ.11ರಂದು ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು’ ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಹನುಮಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಹಾಜಿ ಮಸ್ತಾನಿ ಬಿ.ಗಣೇಕಲ್, ತಿಮ್ಮಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.