ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಟ್ಟಿಚಿನ್ನದಗಣಿ: ಕುಡುಕರ ಅಡ್ಡೆಯಾದ ಇಂದಿರಾ ಕ್ಯಾಂಟೀನ್ ಕಟ್ಟಡ

Published 4 ಜುಲೈ 2024, 5:50 IST
Last Updated 4 ಜುಲೈ 2024, 5:50 IST
ಅಕ್ಷರ ಗಾತ್ರ

ಹಟ್ಟಿಚಿನ್ನದಗಣಿ: ಪಟ್ಟಣದ ಸಂತೆ ಬಜಾರ್ ಮೈದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ಕೆಲಸ ಸ್ಥಗಿತವಾಗಿದ್ದು ಕುಡುಕರ ಅಡ್ಡೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕ್ಯಾಂಟೀನ್ ಕಟ್ಟಡ ಕಾಮಗಾರಿ ಆರಂಭದಲ್ಲಿ ಭರದಿಂದ ಸಾಗಿತ್ತು. ಆದರೆ ಯಾವ ಕಾರಣಕ್ಕೆ ಕಾಮಗಾರಿಯನ್ನು ಸ್ಧಗಿತಗೊಂಡಿತು ಎಂಬುದು ತಿಳಿಯಲಿಲ್ಲ. ಇದರಿಂದ ಪುಂಡ ಪೋಕರಿಗಳು ಮದ್ಯ ಸೇವನೆ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಇದನ್ನು ತಡೆಗಟ್ಟಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಕಟ್ಟಡಕ್ಕೆ ಬಾಗಿಲು ಸಿಮೆಂಟ್ ಕಾಮಗಾರಿ ಹಾಗೆ ಬಿಡಲಾಗಿದೆ. ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳು ಕಲ್ಪಿಸಬೇಕಾಗಿದೆ. ಕಟ್ಟಡಕ್ಕೆ ಬಾಗಿಲುಗಳು ಇಲ್ಲದಿದ್ದರಿಂದ ಕುಡುಕರು ಒಳಗಡೆ ಕುಳಿತು ಮದ್ಯ ಸೇವನೆ ಮಾಡಿ ಅಲ್ಲಿಯೇ ಬಾಟಲಿ, ಇತರ ಕಸವನ್ನು ಬಿಸಾಡಿ ಹೋಗುತ್ತಿದ್ದಾರೆ. ಕಟ್ಟಡದ ಒಳಗೆ ಗುಟ್ಕಾ, ತಂಬಾಕು ತಿಂದು ಗೋಡೆಗಳಿಗೆ ಉಗುಳಿ ಹೊಲಸು ಮಾಡಿರುವುದು ಕಂಡುಬರುತ್ತದೆ. ಕಟ್ಟಡದ ಪರಿಸರ ತಿಪ್ಪೆಗುಂಡಿ ಪರಿವರ್ತನೆಯಾಗಿದೆ.

ರಾತ್ರಿ ಸಮಯದಲ್ಲಿ ಈ ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಕಡೆ ಗಮನಹರಿಸುತ್ತಿಲ್ಲ. ಕಾಮಗಾರಿ ಹಿಡಿದ ಗುತ್ತಿಗೆದಾರ ಸರ್ಕಾರದ ನಿಮಯಗಳನ್ನು ಪಾಲನೆ ಮಾಡುತ್ತಿಲ್ಲ. ಆದಷ್ಟು ಬೇಗ ಮೇಲಧಿಕಾರಿಗಳು ಇಂದಿರಾ ಕ್ಯಾಂಟೀನ್ ಕಟ್ಟಡ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಉಪಯೋಗವಾಗಲು ಕ್ರಮ ಕೈಗೊಳ್ಳಬೇಕು ಎಂಬುದು ಸಾಮಾಜಿಕ ಹೋರಾಟಗಾರ ಶಿವರಾಜ ಕಂದಗಲ್ ಆಗ್ರಹಿಸಿದ್ದಾರೆ.

ಹಟ್ಟಿಚಿನ್ನದಗಣಿ ಸಂತೆ ಬಜಾರ್ ಮೈದಾನದಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್‌ ಒಳಗಡೆ ಕುಡುಕರು ಮದ್ಯಪಾನ ಮಾಡಿ ಬಾಟಲಿ ಹಾಗೂ ಕಸ ಬಿಸಾಡಿರುವುದು
ಹಟ್ಟಿಚಿನ್ನದಗಣಿ ಸಂತೆ ಬಜಾರ್ ಮೈದಾನದಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್‌ ಒಳಗಡೆ ಕುಡುಕರು ಮದ್ಯಪಾನ ಮಾಡಿ ಬಾಟಲಿ ಹಾಗೂ ಕಸ ಬಿಸಾಡಿರುವುದು
ಶೀಘ್ರದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡದ ಬಾಕಿ ಕಾಮಗಾರಿಯನ್ನು ಮುಗಿಸಿ ಬಾಗಿಲುಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗುವುದು.
ಪರಮಾನಂದ ಮುಖ್ಯ ಗುತ್ತಿಗೆದಾರ ಬೆಂಗಳೂರು
ಇಂದಿರಾ ಕ್ಯಾಂಟೀನ್ ಕಟ್ಟಡ ಒಳಗಡೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದರ ಬಗ್ಗೆ ಜನರಿಂದ ದೂರುಗಳು ಬಂದಿವೆ. ಸೂಕ್ತ ಕ್ರಮ ಕೈಗೊಳ್ಳಲಾವುದು.
ಹೊಸಕೇರಪ್ಪ ಹಟ್ಟಿ ಪೊಲೀಸ್ ಠಾಣೆ ಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT