ಸಿಂಧನೂರು: ಆ.15 ರಂದು 78ನೇ ಸ್ವಾತಂತ್ಯೋತ್ಸವದ ದಿನಾಚರಣೆಯಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಅಪಮಾನ ತೋರಿದ ಹಾಸ್ಟೆಲ್ ವಾರ್ಡನ್‍ನನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕ ಶುಕ್ರವಾರ ಮಿನಿವಿಧಾನಸೌಧ ಎದುರು ಪ್ರತಿಭಟಿಸಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿತು.

ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಗೌರವ ಸಲ್ಲಿಸಲು ಸರ್ಕಾರ ಆದೇಶಿಸಿದೆ. ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒಳಪಡುವ ಸುಕಾಲಪೇಟೆ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಸಂದರ್ಭದಲ್ಲಿ ಅಂಬೇಡ್ಕರ್ ಫೋಟೊ ಇಟ್ಟಿಲ್ಲ. ಸಿ.ಸಿ ಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮೇಲ್ವಿಚಾರಕಿ ಸುವರ್ಣ ಅವರನ್ನು ಅಮಾನತು ಮಾಡಬೇಕು ಎಂದು ಸಂಚಾಲಕ ಮೌನೇಶ ಜಾಲವಾಡಿಗಿ ಆಗ್ರಹಿಸಿದರು.

ಸದಸ್ಯರಾದ ಪ್ರವೀಣಕುಮಾರ ಧುಮತಿ, ಆಲಂಬಾಷಾ ಬೂದಿಹಾಳ ಮಾತನಾಡಿದರು. ಮುಖಂಡರಾದ ಮರಿಯಪ್ಪ ಚಿರು, ಪಂಪಾಪತಿ ಹಂಚಿನಾಳ, ಛತ್ರಪ್ಪ, ಬಸವರಾಜ ಬುಕ್ಕನಟ್ಟಿ, ಉದಂಡಪ್ಪ, ಪಂಪಾಪತಿ ತಿಡಿಗೋಳ, ದುರುಗೇಶ ಕಲಮಂಗಿ, ಸುರೇಶ ಎಲೆಕೂಡ್ಲಿಗಿ, ಯಂಕೋಬ ಬೂತಲದಿನ್ನಿ, ಜಂಬಣ್ಣ ಉಪ್ಪಲದೊಡ್ಡಿ, ಶರಣಬಸವ ಸುಂಕನೂರ, ವಿರುಪಾಕ್ಷಿ ಸಾಸಲಮರಿ, ಮೌನೇಶ ಅಮರಾಪುರ, ಪರಶುರಾಮ ದೀನಸಮುದ್ರ, ಬುನ್ನಟ್ಟಿ ಶರಣಬಸವ, ರಮೇಶ ಬಸಾಪುರ, ಯಮನುರ ಬಸಾಪುರ, ಮಹೇಶ ಚಿರತನಾಳ, ಶ್ರೀಕಾಂತ, ಮುದಿಯಪ್ಪ ಹೊಸಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.