ಜಾಲಹಳ್ಳಿ: ‘ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯ ವಿವಿಧ ವಿತರಣಾ ಕಾಲುವೆ, ಉಪ ಕಾಲುವೆ ಹಾಗೂ ಲ್ಯಾಟ್ರಲ್‌ಗಳನ್ನು ನರೇಗಾ ಯೋಜನೆಯಡಿ ಸ್ವಚ್ಛ ಮಾಡಬೇಕು’ ಎಂದು ಮ್ಯಾಕಲದೊಡ್ಡಿ ಗ್ರಾಮದ ಕೂಲಿಕಾರರು ಒತ್ತಾಯಿಸಿದ್ದಾರೆ.

ಸಮೀಪದ ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮ್ಯಾಕಲದೊಡ್ಡಿ ಗ್ರಾಮದಲ್ಲಿ ನಿತ್ಯ 200 ಜನ ಕೂಲಿಕಾರರು ಕಳೆದ ನಾಲ್ಕೂ ದಿನಗಳಿಂದ 8 ಕಿ.ಮೀ ದೂರದ ಸಂಪತ್ತರಾಯನ ದೊಡ್ಡಿ ಗ್ರಾಮದ ಬೆಟ್ಟ ಒಂದರಲ್ಲಿ (ಟ್ರಚ್) ಗುಂಡಿ ಅಗೆಯುವ ಕೆಲಸ ಮಾಡುತ್ತಿದ್ದಾರೆ.

ಶನಿವಾರ ಕಾಮಗಾರಿ ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು, ‘ಗುಡ್ಡದಲ್ಲಿ ಕೆಲಸ ಮಾಡುವುದರಿಂದ ಕೂಲಿ ಬರುತ್ತೆ ಅದರೆ, ಯಾರಿಗೂ ಲಾಭವಿಲ್ಲ. ಅದೇ ಕಾಲುವೆಗಳ ಹೂಳು ಸ್ವಚ್ಛ ತೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತೆ’ ಎಂದು ರವಿ ನಾಯಕ ಮ್ಯಾಕಲದೊಡ್ಡಿ ತಿಳಿಸಿದರು.

‘ಮ್ಯಾಕಲದೊಡ್ಡಿ ಗ್ರಾಮದ ಸುತ್ತಲು ಯಾವುದೇ ಬೆಟ್ಟ, ಗುಡ್ಡ ಇಲ್ಲದ್ದರಿಂದ ನಿತ್ಯ 200 ಜನ ಕೂಲಿಕಾರರು ಕೆಲಸಕ್ಕೆ ಖಾಸಗಿ ವಾಹನ ಮಾಡಿಕೊಂಡು ಕೆಲಸಕ್ಕೆ ಸಂಪತರಾಯನದೊಡ್ಡಿ ಗ್ರಾಮದ ಗುಡ್ಡಕ್ಕೆ ಬರುವಂತಾಗಿದೆ. ಕೆಲಸಕ್ಕೆ ಬಂದು ಹೋಗುವ ವಾಹನದ ವ್ಯವಸ್ಥೆ ಗ್ರಾ.ಪಂ ಅಧಿಕಾರಿಗಳು ಮಾಡುವುದಿಲ್ಲ. ಕೆಲಸದ ಸ್ಥಳದಲ್ಲಿ ನೆರಳು, ಕುಡಿಯುವ ನೀರು ವ್ಯವಸ್ಥೆ ಇಲ್’ ಎಂದು ತಿಳಿಸಿದರು.

‘ವಿವಿಧ ಕಾಲುವೆಗಳಲ್ಲಿ ಹೂಳು ತುಂಬಿದ್ದು ಸರಾಗವಾಗಿ ನೀರು ಹರಿಯುತ್ತಿಲ್ಲ. ಬೆಟ್ಟದಲ್ಲಿ ಟ್ರಚ್ ಅಗೆವುದಕ್ಕಿಂತ ರೈತರ ಜಮೀನುಗಳಲ್ಲಿ ಬಸಿ ಕಾಲುವೆ, ಬಂಡಿ ಮಾರ್ಗ, ಸಣ್ಣ ಕಾಲುವೆಗಳು ಹೂಳು ಸ್ವಚ್ಚತೆ ಮಾಡುವಂತಹ ಕಾಮಗಾರಿಗಳನ್ನು ಗ್ರಾ.ಪಂ ಅಡಳಿತ ಮಂಡಳಿ ಕೈಗೊಳ್ಳಬೇಕು. ಕಳೆದ ಎರಡು ವರ್ಷಗಳಿಂದ ಕಾಲುವೆಗಳ ಹೂಳು ಸ್ವಚ್ಛತೆಗೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಮಾಡದೇ ಇರುವುದರಿಂದ ರೈತರಿಗೆ ಸಮಸ್ಯೆ ಆಗಿದೆ’ ಎಂದು ರೈತರಾದ ರವಿ ನಾಯಕ, ಶಿವಕುಮಾರ, ರಮೇಶ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.