ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget 2023 | ರಾಯಚೂರು ಜಿಲ್ಲೆಯ ಜನರ ಹಲವು ನಿರೀಕ್ಷೆ

ರಾಯಚೂರು ವಿಶ್ವವಿದ್ಯಾಲಯ, ವಿಮಾನ ನಿಲ್ದಾಣಕ್ಕೆ ಅನುದಾನದ ಅಪೇಕ್ಷೆ
Published : 6 ಜುಲೈ 2023, 6:39 IST
Last Updated : 6 ಜುಲೈ 2023, 6:39 IST
ಫಾಲೋ ಮಾಡಿ
Comments
ಐಐಐಟಿ ನೂತನ ಕ್ಯಾಂಪಸ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಕೊಡಬೇಕು. ಉದ್ಯೋಗ ಸೃಷ್ಟಿಗೆ ಹೊಸ ಯೋಜನೆಗಳನ್ನು ಘೋಷಿಸಬೇಕು.
ಹಯ್ಯಾಳಪ್ಪ ಎಐಡಿಎಸ್ಒ ಜಿಲ್ಲಾ ಘಟಕದ ಅಧ್ಯಕ್ಷ
ಅಭಿವೃದ್ಧಿ ಕಾಣದ ಹೊಸ ತಾಲ್ಲೂಕುಗಳು
ಜಿಲ್ಲೆಯ ಹೊಸ ತಾಲ್ಲೂಕುಗಳಾದ ಸಿರವಾರ ಮತ್ತು ಮಸ್ಕಿಯಲ್ಲಿ ಈ ವರ್ಷದಲ್ಲೇ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡಬೇಕು. ಸಾರ್ವಜನಿಕರು ಹಳೆಯ ತಾಲ್ಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ. ‘ಮಸ್ಕಿ ತಾಲ್ಲೂಕಿಗೆ ಪೂರ್ಣ ಪ್ರಮಾಣದ ಸರ್ಕಾರಿ ಕಚೇರಿಗಳ ಆರಂಭಕ್ಕೆ ಹಣ ಮೀಸಲಿಡುವ ಮೂಲಕ ತಾಲ್ಲೂಕಿನ‌ ಜನರ ಬಹುದಿನದ ಬೇಡಿಕೆಗೆ ಸ್ಪಂದಿಸಬೇಕು‘ ಎಂದು ಮಸ್ಕಿ ಪುರಸಭೆ ಮಾಜಿ ಸದಸ್ಯ ಎಂ. ಅಮರೇಶ ಹೇಳುತ್ತಾರೆ. ಕೃಷ್ಣಾ ಪ್ರವಾಹದ ನಡುಗಡ್ಡೆ ಪ್ರದೇಶಗಳ ಜನರ ಸಮಸ್ಯೆ ಪರಿಹಾರಕ್ಕೆ ಸೇತುವೆಗಳ ನಿರ್ಮಾಣ ಮಾಡಬೇಕು. ಶಾಶ್ವತ ಸ್ಥಳಾಂತರದ ಪರಿಹಾರ ಘೋಷಿಸಬೇಕು. ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಗಣಿ ವಿಜ್ಞಾನ ಕಾಲೇಜು ಐತಿಹಾಸಿಕ ಪ್ರವಾಸಿ ತಾಣಗಳಾದ ಜಲದುರ್ಗ ಕೋಟೆ ಮುದಗಲ್ಲ ಕೋಟೆ ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ಮಾಡಬೇಕು. ಗುಂಡಲಬಂಡ ಜಲಪಾತ ಅಭಿವೃದ್ಧಿ ನಾರಾಯಣಪುರ ಅಣೆಕಟ್ಟೆ ಬಲಭಾಗದ ರೋಡಲಬಂಡಾ ಕ್ರಾಸ್ ಬಳಿ ಉದ್ಯಾನ ನಿರ್ಮಾಣ ಹಾಗೂ ಎನ್ನುವುದು ಜಿಲ್ಲೆಯ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ. ‘ನಡುಗಡ್ಡೆ ಪ್ರದೇಶಗಳ ಸಂತ್ರಸ್ತ ರೈತ ಕುಟುಂಬಗಳ ಶಾಶ್ವತ ಸ್ಥಳಾಂತರ ಹಾಗೂ ತಾಲ್ಲೂಕಿ‌ನ ಸಮಗ್ರ ನೀರಾವರಿ ಯೋಜನೆಗಳಿಗೆ ಬಜೆಟ್ ನಲ್ಲಿ ಹಣ ಮೀಸಲು ಘೋಷಣೆ ನಿರೀಕ್ಷೆಯಲ್ಲಿದ್ದೇವೆ’ ಎಂದು ಲಿಂಗಸುಗೂರಿನ ಪ್ರಗತಿಪರ ಚಿಂತಕ ಆರ್. ಮಾನಸಯ್ಯ ಹೇಳುತ್ತಾರೆ. ‘ದೇವದುರ್ಗ ತಾಲ್ಲೂಕಿನ ಬಹುದಿನದ ಮಹತ್ವಕಾಂಕ್ಷಿ ಎನ್ ಆರ್ ಬಿ ಸಿ ಬಲದಂಡೆ 9 (ಎ) ಕಾಲುವೆ ಪ್ರಾರಂಭಿಸುವ ನೀರೀಕ್ಷೆ ರೈತರಿಗೆ ಇದೆ. ಸರ್ಕಾರ ಕಾಲುವೆ ನಿರ್ಮಾಣಕ್ಕೆ ಅನುದಾನ ನೀಡಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಪಾಟೀಲ ಇಂಗಳದಾಳ ಮನವಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT