ಲಿಂಗಸುಗೂರು: ಬರಗಾಲದ ಕರಿನೆರಳಿಂದ ಹಳ್ಳ ಕೊಳ್ಳಗಳು ಬತ್ತಿ ಬರಿದಾಗಿವೆ. ಅಡವಿಗೆ ಮೇಯಲು ಹೋಗುವ ದನಕರು ಮತ್ತು ಪ್ರಾಣಿ, ಪಕ್ಷಿ ನೀರಿನ ದಾಹ ತೀರಿಸಿಕೊಳ್ಳಲು ಪದಾಡುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಪ್ರಾಣಿ, ಪಕ್ಷಿಗಳ ನೀರಿನ ದಾಹ ತೀರಿಸಲು ಯುವಕ ಅರವಟ್ಟಿಗೆ ಆರಂಭಿಸಿ ಮಾದರಿಯಾಗಿದ್ದಾರೆ.

ಪಟ್ಟಣ ಸೇರಿದಂತೆ ಕೆಲ ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ನಾಗರಿಕರಿಗಾಗಿ ಕುಡಿಯುವ ನೀರಿನ ಅರಟಿಗೆ ದಿನಕ್ಕೊಂದು ಆರಂಭಗೊಳ್ಳುತ್ತಿವೆ. ಆದರೆ, ಪ್ರಾಣಿ, ಪಕ್ಷಿಗಳಿಗಾಗಿ ಅರವಟಿಗೆ ಮೊದಲು ಬಾರಿಗೆ ಯಲಗಲದನ್ನಿ ಸುತ್ತಮುತ್ತ ಆರಂಭಗೊಂಡಿದ್ದು ಪ್ರಾಣಿ ಪ್ರಿಯರಲ್ಲಿ ಖುಷಿ ತಂದಿದೆ.

ತಾಲ್ಲೂಕು ಕೇಂದ್ರದಿಂದದ 2ಕಿ.ಮೀ ಅಂತರದಲ್ಲಿರವ ಯಲಗಲದಿನ್ನಿ ಗ್ರಾಮದಲ್ಲಿ ಮನೆಗಳ ನಿರ್ಮಾಣಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿ ಪೂರೈಕೆ ಮಾಡುವ ಯುವಕ ನಾಗರಾಜ ನಾಯಕ ಪ್ರಾಣಿ, ಪಕ್ಷಿಗಳ ಮೂಕ ವೇದನೆ ಕಂಡು ಪಟ್ಟಣ ಸೇರಿದಂತೆ ಹೊರ ವಲಯದ ಎಂಟು ಕಡೆಗಳಲ್ಲಿ ಅರವಟ್ಟಿಗೆ ತೊಟ್ಟೆಗಳನ್ನು ಹಾಕಿದ್ದಾರೆ.

ಮೂವತ್ತು ವಾಟರ್ ಟ್ಯಾಂಕರ್ ಹೊಂದಿರುವ ಯುವಕರು ತೊಟ್ಟಿಟೆಗಳು ಖಾಲಿ ಆಗದಂತೆ ನೀರು ತುಂಬಿಸುವ ಚಿಂತನೆಯಲ್ಲಿದ್ದಾರೆ. ಮಳೆಗಾಲ ಆರಂಭಗೊಂಡು ಹಳ್ಳ, ಕೆರೆ, ಕೊಳ್ಳಗಳಲ್ಲಿ ನೀರು ಬರುವವರೆಗೆ ಅರವಟಿಗೆ ಸೇವೆ ಮುಂದುವರೆಸುವ ನಿರ್ಧಾರ ಪ್ರಕಟಿಸಿದ್ದಾರೆ.

‘ಉದ್ಯೋಗಿ ಯುವಕರು ಮೂಕ ಪ್ರಾಣಿ ಪಕ್ಷಿಗಳ ಸಂಕಷ್ಟ ಅರಿತು ಹೊರ ವಲಯಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಸ್ವಂತ ಟ್ಯಾಂಕರ್‌ದಿಂದ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಿವುದು ಸಂತಷದ ಸಂಗತಿ. ಇಂತಹ ಕೆಲಸ ಕಾರ್ಯಗಳಿಗೆ ವನಸಿಸರಿ ಫೌಂಡೇಷನ್ ಪ್ರೋತ್ಸಾಹ ನೀಡಲಿದೆ’ ಎಂದು ಸಂಚಾಲಕ ಚೆನ್ನಬಸವ ಹೇಳಿದ್ದಾರೆ.

‘ನಮ್ಮ ತಾಯಿ–ತಂದೆ ಬಸಮ್ಮ ರಾಮಪ್ಪ ಹೆಸರಿನ ಬಿ.ಆರ್ ವಾಟರ್ ಟ್ಯಾಂಕರ್ ಹೆಸರಲ್ಲಿ ಉದ್ಯೋಗ ಮಾಡುತ್ತಿರುವೆ. ಪ್ರಾಣ ಪಕ್ಷಿಗಳ ಸಂಕಷ್ಟ ಕಂಡು ಅರವಟಿಗೆ ಆರಂಭಿಸಿರುವೆ. ಮಳೆಗಾಲ ಆರಂಭದವರೆಗೆ ಮುಂದುವರೆಸುವೆ. ಹಣ ಖರ್ಚು ಆಗುವುದು ಮುಖ್ಯವಲ್ಲ. ಪುಣ್ಯದ ಕೆಲಸ ಮಾಡಬೇಕು ಎಂಬ ಕನಸು’ ಎಂದು ನಾಗರಾಜ ನಾಯಕ ಅಡವಿಭಾವಿ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.