ಸಿಂಧನೂರು: ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯ ಈದ್ ಮಿಲಾದುನ್ನಬೀ ಅಂಗವಾಗಿ ಸೋಮವಾರ ಮುಸ್ಲಿಂ ಸಮಾಜದವರು ಮೆಕ್ಕಾ ಮದೀನಾ ಭಾವಚಿತ್ರ ಹಾಗೂ ಅಲ್ಲಾ ಹೆಸರಿನ ಸ್ತಬ್ಧಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು.

ನಗರದ ಮಹಿಬೂಬಿಯಾ ಕಾಲೊನಿಯಲ್ಲಿರುವ ನೂರಾನಿ ಮಸ್ಜೀದ್‍ನಲ್ಲಿ ಹಸಿರು ಧ್ವಜಸ್ತಂಭಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಹೂವಿನ ಹಾರ ಕಾಕುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ದೊಡ್ಡ ನೀರಿನ ಟ್ಯಾಂಕ್, ಮಹಾತ್ಮಗಾಂಧಿ ವೃತ್ತಕ್ಕೆ ತಲುಪಿತು. ಅಲ್ಲಿಗೆ ಪಿಡಬ್ಲ್ಯುಡಿ ಕ್ಯಾಂಪ್ ಹಾಗೂ ಎ.ಕೆ.ಗೋಪಾನಗರದಿಂದ ಪ್ರತ್ಯೇಕ ಮೆರವಣಿಗೆ ಬಂದು ಸೇರಿಕೊಂಡಿತು.

ಮಜ್ಜಿಗೆ, ಸಿಹಿ, ನೀರು ವಿತರಣೆ: ಮೆರವಣಿಗೆಯು ಬಸ್ ನಿಲ್ದಾಣದ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪುತ್ತಿದ್ದಂತೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ಮುಸ್ಲಿಂ ಸಮಾಜದವರಿಗೆ ಮಜ್ಜಿಗೆ, ನೀರು ಹಾಗೂ ಸಿಹಿ ತಿನ್ನಿಸುವ ಮೂಲಕ ಶುಭಾಶಯ ಕೋರಿ ಭಾವೈಕ್ಯತೆ ಮೆರೆದರು. ನಗರಸಭೆ ಸದಸ್ಯ ಕೆ.ರಾಜಶೇಖರ, ಸಮಿತಿ ಗೌರವಾಧ್ಯಕ್ಷ ಸಿದ್ರಾಮೇಶ ಮನ್ನಾಪುರ, ಅಧ್ಯಕ್ಷ ಸುರೇಶ ಹಚ್ಚೊಳ್ಳಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ, ನಗರಸಭೆ ಮಾಜಿ ಸದಸ್ಯ ಲಿಂಗರಾಜ ಹೂಗಾರ, ಸಮಿತಿಯ ಸದಸ್ಯರಾದ ರವಿಕುಮಾರ ಉಪ್ಪಾರ, ನಾಗರಾಜ ಬಾದರ್ಲಿ, ಗೋವಿಂದ ಉಪ್ಪಾರ, ಶಿವು ಎಸ್‍ಆರ್‌ಕೆ, ಮಂಜುನಾಥ ಗಾಣಗೇರಾ ಮತ್ತಿತರರಿದ್ದರು.

ನಂತರ ಮೆರವಣಿಗೆಯು ನಟರಾಜ್ ಕಾಲೊನಿ ವೃತ್ತ, ರಾಣಿ ಚನ್ನಮ್ಮ ವೃತ್ತದ ಮೂಲಕ ಕೋಟೆ ಏರಿಯಾದ ಕಿಲ್ಲಾ ಮಸ್ಜೀದ್‍ಗೆ ತಲುಪಿತು. ಮೆರವಣಿಗೆಯುದ್ದಕ್ಕೂ ಇಸ್ಲಾಂ ಧರ್ಮದ ಚಿಹ್ನೆಗಳುಳ್ಳ ಧ್ವಜಗಳು ರಾರಾಜಿಸಿದರು. ಮೌಲಾನಗಳು ವಾಹನದಲ್ಲಿ ಕುಳಿತು ಮೈಕ್‍ನಲ್ಲಿ ಪೈಗಂಬರ್‍ರವರ ಸಂದೇಶಗಳನ್ನು ಸಾರಿದರು.

ಮೆರವಣಿಗೆಯಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಡಿವೈಎಸ್‍ಪಿ ಬಿ.ಎಸ್.ತಳವಾರ, ಸರ್ಕಲ್ ಇನ್‌ಸ್ಪೆಕ್ಟರ್ ವೀರಾರೆಡ್ಡಿ, ಶಹರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್, ಸಂಚಾರ ಠಾಣೆಯ ಸಬ್‍ಇನ್‌ಸ್ಪೆಕ್ಟರ್ ವೆಂಕಟೇಶ ಚವ್ಹಾಣ್ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಜೊತೆಗೆ ಟ್ರಾಫಿಕ್ ಸುಗಮಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.