ಕವಿತಾಳ: ಪಟ್ಟಣದ ಮುಸ್ಲಿಂ ಮುಖಂಡ ಬಿ.ಎ.ಕರೀಂಸಾಬ್ ಅವರು ತಮ್ಮ ಮನೆಯಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಭಾನುವಾರ ಪ್ರಸಾದ ವ್ಯವಸ್ಥೆ ಮಾಡಿದ್ದರು.

ಪಟ್ಟಣ ಸೇರಿದಂತೆ ಅಮೀನಗಡ, ಪಾತಾಪುರ, ಲಕ್ಷ್ಮೀನಾರಾಯಣ ಕ್ಯಾಂಪ್ ಮತ್ತು ತೋರಣದಿನ್ನಿ ಪೀಠದಲ್ಲಿ ಪೂಜೆ ಮುಗಿಸಿಕೊಂಡು ಆಗಮಿಸಿದ ಐವತ್ತಕ್ಕೂ ಅಧಿಕ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪ್ರಸಾದ ಸ್ವೀಕರಿಸಿದರು.

‘ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲು ಮತ್ತು ದೇವಸ್ಥಾನಕ್ಕೆ ತೆರಳಲು ಯಾವುದೇ ಜಾತಿ, ಧರ್ಮ, ಬೇಧ, ಭಾವ ಇಲ್ಲದಿರುವುದು ಮೆಚ್ಚುಗೆಯ ಸಂಗತಿ ಹೀಗಾಗಿ ಮಾಲಾಧಾರಿಗಳಿಗೆ ಎರಡು ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದೇನೆʼ ಎಂದು ಕರೀಂಸಾಬ್ ತಿಳಿಸಿದರು.

ಚನ್ನಯ್ಯಸ್ವಾಮಿ, ಯಮನಪ್ಪ, ಸುಂದರ ರಾಮರಡ್ಡಿ, ವೆಂಕಟೇಶ, ಶಂಕರ, ದೇವರಾಜ, ಪ್ರಭುರಾಯ, ಶರಣಬಸವ, ನಾಗರಾಜ, ತಾಯಣ್ಣ ಯಾದವ, ವೀರಭಧ್ರಪ್ಪ ವಿಶ್ವಕರ್ಮ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.