ಕವಿತಾಳ: ಒಂದು ವಾರದಿಂದ ಆಗಾಗ ಸುರಿಯುತ್ತಿರುವ ಮಳೆಯಿಂದ ಸಮೀಪದ ಚಿಲ್ಕರಾಗಿ ಗ್ರಾಮದಲ್ಲಿನ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಗ್ರಾಮಸ್ಥರು ಸಂಚಾರಕ್ಕೆ ಪರದಾಡುವಂತಾಗಿದೆ.

ಜಿಟಿ–ಜಿಟಿ ಮಳೆಯಿಂದ ಗ್ರಾಮದ ಅಂಬೇಡ್ಕರ್ ವೃತ್ತದ ಹತ್ತಿರ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯುದ್ದಕ್ಕೂ ನೀರು ನಿಂತ ಪರಿಣಾಮ ಕೆಸರು ಉಂಟಾಗಿದ್ದು ವೃದ್ಧರು, ಮಕ್ಕಳು ಜಾರಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಸರಿನಲ್ಲಿಯೇ ಟ್ರ್ಯಾಕ್ಟರ್ ಮತ್ತಿರ ವಾಹನಗಳ ಓಡಾಟದಿಂದ ತಗ್ಗುಗಳು ಬಿದ್ದಿವೆ. ಊರಿನ ಪ್ರಮುಖ ರಸ್ತೆ ಹೀಗೆ ಹಾಳಾಗಿದ್ದು ಅದನ್ನು ದಾಟಬೇಕಾದರೆ ಹರಸಾಹಸ ಪಡುವಂತಾಗಿದೆ. ಸಂಬಂಧದಪಟ್ಟ ಅಧಿಕಾರಿಗಳು ಮರಂ ಹಾಕಿ ರಸ್ತೆ ತಾತ್ಕಾಲಿಕವಾಗಿ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.