ಜಾಲಹಳ್ಳಿ: 'ಪಟ್ಟಣದ ಮಧ್ಯ ಭಾಗದಿಂದ ಹಾದು ಹೋಗಿರುವ ತಿಂಥಣಿ ಬ್ರಿಡ್ಕ್ - ಕಲ್ಮಾಲ ರಾಜ್ಯ ಹೆದ್ದಾರಿಯಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡ್ಡಿಯಾಗಿದೆ.

ಶುಕ್ರವಾರ ಸಂಜೆ ಸುರಿದ ಮಳೆ ನೀರು ರಸ್ತೆಯಲ್ಲಿಯೇ ಸಂಗ್ರವಾಗಿರುವ ದೃಶ್ಯಕಂಡು ಬಂತು. ಪಟ್ಟಣದಲ್ಲಿ ಸುಮಾರು 3 ಕಿ.ಮೀ ರಸ್ತೆಯನ್ನು 100 ಅಡಿ ವಿಸ್ತೀರ್ಣವಾಗಿ ನಿರ್ಮಿಸಿ ಎರಡೂ ಬದಿಗೆ ಚರಂಡಿ ವ್ಯವಸ್ಥೆ ಕೂಡ ಮಾಡಿದ್ದಾರೆ. ಅದರೆ ರಸ್ತೆ ಪಕ್ಕದಲ್ಲಿ ವಾಣಿಜ್ಯ ಮಳಿಗೆ ಮಾಲೀಕರು ತಮ್ಮ ಮಳಿಗೆಯ ಮುಂದೆ ಮಣ್ಣು ಹಾಕಿರುವುದರಿಂದ ರಸ್ತೆಯ ಮೇಲೆ ಬಿದ್ದಿರುವ ಮಳೆ ನೀರು ಸರಾಗವಾಗಿ ಚರಂಡಿಯಲ್ಲಿ ಹೋಗದಂತೆ ಮೋರಿಗಳು ಮುಚ್ಚಿ ಹೋಗಿವೆ. ಇದರಿಂದ ರಸ್ತೆ ಹದಗೆಟ್ಟಿದೆ. 100 ಅಡಿ ವಿಸ್ತಾರವಾಗಿ ರಸ್ತೆ ಮಾಡಿರುವ ಉದ್ದೇಶವಾದರೂ ಏನಿತ್ತು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

‘ನಿರಂತರ ಮಳೆಯಿಂದ ರಸ್ತೆಯಲ್ಲಿ ಕೆಸರು ಮಣ್ಣು ತುಂಬಿತ್ತು. ಇದರಿಂದ ನಿಯಂತ್ರಣ ಕಳೆದುಕೊಂಡ ಅನೇಕ ಬೈಕ್ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡ ಘಟನೆಗಳು ಜರುಗಿವೆ. ಅಲ್ಲದೇ ಬಸವೇಶ್ವರ ವೃತ್ತ, ಟಿಪ್ಪುಸುಲ್ತಾನ ವೃತ್ತ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತದ ಬಳಿ ಬಿಡಾಡಿ ದನಗಳು ರಸ್ತೆಯಲ್ಲಿಯೇ ಮಲಗುವುದರಿಂದ ಜನತೆ, ಮಕ್ಕಳು, ವೃದ್ಧರು, ವಾಹನ ಸವರರು ಕಷ್ಟ ಅನುಭವಿಸುತ್ತಿದ್ದಾರೆ. ತಕ್ಷಣವೇ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಗ್ರಾ.ಪಂ ಅಡಳಿತ ಸೂಕ್ತ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.