ಸಿಂಧನೂರಿನ ತಾಲ್ಲೂಕಿನ ಬಂಗಾಲಿ ನಿವಾಸಿಗಳು ಪೌರತ್ವಕ್ಕಾಗಿ ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ಸಂದರ್ಭ.
ಆನ್‍ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪರಿಶೀಲನಾ ಸಮಿತಿಗಳು ಪರಿಶೀಲಿಸಿದ ನಂತರ ಪೌರತ್ವ ಪ್ರಮಾಣ ಪತ್ರ ನೀಡಲು ಶಿಫಾರಸು ಮಾಡಲಾಗುವುದು.
ಅರುಣ್ ಎಚ್.ದೇಸಾಯಿ ತಹಶೀಲ್ದಾರ್ ಸಿಂಧನೂರು
ಅಖಂಡ ಭಾರತದ ನಿವಾಸಿಗಳಾಗಿದ್ದರೂ 50 ವರ್ಷಗಳಿಂದ ದ್ವಿತೀಯ ದರ್ಜೆಯ ನಾಗರಿಕರಂತೆ ಬದುಕುತ್ತಿದ್ದೆವು. ನಮಗೆ ಪೌರತ್ವ ನೀಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ. ತಿ
ಪ್ರಸೆನ್ ರಫ್ತಾನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಭಾರತ್ ಬಂಗಾಲಿ ಉದ್ಬಾಸ್ತು ಸಮನ್ವಯ ಸಮಿ
ಎಸ್‌ಸಿ ಪ್ರಮಾಣ ಪತ್ರಕ್ಕೆ ಆಗ್ರಹ
‘ಪೌರತ್ವ ಲಭಿಸಿದರೂ ನಮ್ಮನ್ನು ಬಹುಮುಖ್ಯವಾದ ಸಮಸ್ಯೆಗಳು ಕಾಡುತ್ತಿವೆ. ಸಿಂಧನೂರಿನಲ್ಲಿ 50 ವರ್ಷ ಕಳೆದರೂ ಇಲ್ಲಿಯವರೆಗೆ ಜಾತಿ ಪ್ರಮಾಣ ಪತ್ರ ಲಭ್ಯವಾಗುತ್ತಿಲ್ಲ. ಪಶ್ಚಿಮ ಬಂಗಾಲ ಒಡಿಶಾ ಮಣಿಪುರ ತ್ರಿಪುರಾ ಅಸ್ಸಾಂ ಹಾಗೂ ಮತ್ತಿತರ ರಾಜ್ಯಗಳಲ್ಲಿ ‘ನಮಶೂದ್ರ’ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರೆಯುತ್ತಿದ್ದು ಇಲ್ಲಿ ವಾಸವಾಗಿರುವ ಬಹುಸಂಖ್ಯಾತರು ನಮಶೂದ್ರರಾಗಿದ್ದಾರೆ. ಯಾವುದೇ ಜಾತಿ ಪ್ರಮಾಣ ಪತ್ರ ಕೊಡುತ್ತಿಲ್ಲ. ಇತರ ರಾಜ್ಯಗಳಂತೆ ಇಲ್ಲಿಯೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಬೇಕು’ ಎಂದು ನಿಖಿಲ್ ಭಾರತ್ ಬಂಗಾಲಿ ಉದ್ಬಾಸ್ತು ಸಮನ್ವಯ ಸಮಿತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೆಸೆನ್ ರಫ್ತಾನ್ ಆಗ್ರಹಿಸಿದ್ದಾರೆ.
ಪೌರತ್ವ ಪಡೆದ ಐವರು
ಸಿಂಧನೂರು ತಾಲ್ಲೂಕಿನ ಆರ್.ಎಚ್.ನಂ.4ರ ನಿವಾಸಿ ಜಯಂತ್ ಮಂಡಲ್ ಆರ್.ಎಚ್.ನಂ.2ರ ಬಿಪ್ರದಾಸ್ ಗೋಲ್ದರ್ ರಾಮಕೃಷ್ಣ ಅಧಿಕಾರಿ ಸುಕುಮಾರ್ ಮಂಡಲ್ ಅದೈತ್ ಅವರಿಗೆ ಕೇಂದ್ರ ಸರ್ಕಾರದಿಂದ ಪೌರತ್ವ ಪ್ರಮಾಣ ಪತ್ರ ಲಭಿಸಿದೆ. ಪೌರತ್ವ ನೀಡುವುದಕ್ಕಾಗಿಯೇ 2024ರ ಮೇ ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿದ್ದು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಗುಪ್ತಚರ ಇಲಾಖೆ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಬಳಿಕ ರಾಜ್ಯ ಮಟ್ಟದ ಸಮಿತಿಯು ಸಂಪೂರ್ಣ ಮಾಹಿತಿ ಪಡೆದು ಪೌರತ್ವ ಪ್ರಮಾಣ ಪತ್ರವನ್ನು ನೀಡಲಿದೆ.