ರಾಯಚೂರು: ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ದಿಂದ ರಾಯಚೂರು ನಗರ ಹಾಗೂ ಗ್ರಾಮೀಣ ಪ್ರದೇಶದ ಜನರ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ಪ್ರತಿ ತಿಂಗಳು ಮೂರನೇ ಶನಿವಾರ ನಡೆಸುವ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ನಾಮ್ ಕೆ ವಾಸ್ತೆ ನಡೆಯುತ್ತಿದೆ.

ಕುಂದು ಕೊರತೆ ನಡೆಯುವ ದಿನಾಂಕದ 4, 5 ದಿನಗಳ ಮುಂಚೆ ಪತ್ರಿಕಾ ಪ್ರಕಟಣೆಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಪತ್ರಿಕೆ ಓದುವವರಿಗೆ ಬಿಟ್ಟರೆ ಬೇರೆ ಗ್ರಾಹಕರಿಗೆ ಮಾಹಿತಿಯೇ ಇರುವುದಿಲ್ಲ. ಕೆಲವು ಜೆಸ್ಕಾಂ ಅಧಿಕಾರಿಗಳು ಸಭೆಯಲ್ಲಿ ಕೆಲ ವಿದ್ಯುತ್ ಗುತ್ತಿಗೆದಾರರು ಹಾಗೂ ಇಲಾಖೆಯ ಸಿಬ್ಬಂದಿಯನ್ನು ಕೂರಿಸಿ ಚಿತ್ರ ತೆಗೆದು ದಾಖಲೆಯಾಗಿ ಸಂಗ್ರಹಿಸಿಕೊಳ್ಳುತ್ತಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಕುಂದುಕೊರತೆ ಸಭೆಗಾಗಿ ಜೆಸ್ಕಾಂ ಕಚೇರಿಗೆ ಬರುವ ಸಾರ್ವಜನಿಕರಿಗೆ, ವಿದ್ಯುತ್ ಗ್ರಾಹಕರಿಗೆ ಸಭೆ ನಿಗದಿಪಡಿಸಿದ ಸ್ಥಳದ ಬಗ್ಗೆ ಬಹುತೇಕ ಸಿಬ್ಬಂದಿಗೇ ಗೊತ್ತಿಲ್ಲ. ಸಭೆಗೆ ಬರುವ ಗ್ರಾಹಕರು ಸ್ಥಳದ ಬಗ್ಗೆ ಕೇಳಿದರೆ ಗೊಂದಲದಲ್ಲಿಯೇ ಕಟ್ಟಡದ ವಿಳಾಸ ಹೇಳುತ್ತಾರೆ. ಸಾರ್ವಜನಿಕರಿಗೆ ಸಭೆಗೆ ಹಾಜರಾಗುವಷ್ಟರಲ್ಲಿಯೇ ನಿಗದಿಪಡಿಸಿದ ಅರ್ಧ ಅವಧಿಯೇ ಮುಗಿದಿರುತ್ತದೆ’ ಎಂದು ಗ್ರಾಹಕ ನರಸಿಂಹಲು ಹೇಳುತ್ತಾರೆ.

‘ಕುಂದು ಕೊರತೆ ಸಭೆಯ ಬಗ್ಗೆ ಪ್ರಚಾರ ಮಾಡಿದರೂ ಸಾರ್ವಜನಿಕರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಾರ್ವಜನಿಕರು ದೂರವಾಣಿಯ ಮೂಲಕ, ಪತ್ರಗಳನ್ನು ಬರೆಯುವ ಮೂಲಕ, ಕಚೇರಿಗೆ ಭೇಟಿ ನೀಡಿ ತಮ್ಮ ದೂರು ಸಲ್ಲಿಸುತ್ತಿದ್ದಾರೆ’ ಎನ್ನುತ್ತಾರೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ದೇಸಾಯಿ.

ದೇವರು ವರ ಕೊಟ್ಟರೂ ಪುಜಾರಿ ಕೊಡಲಿಲ್ಲ: ನಗರದ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗದ ಕಚೇರಿಯಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ತಾಲ್ಲೂಕಿನ ಅರಳಿಬೆಂಚಿ ಗ್ರಾಮದ ಯಲ್ಲಪ್ಪ, ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ( ಆರ್ ವೈಎಫ್ಐ) ಜಿಲ್ಲಾ ಮುಖಂಡ ಅಜೀಜ್ ಜಾಗೀದರಾರ್ ಹಾಗೂ ಅರಳಿಬೆಂಚಿ ಗ್ರಾಮದ ಯಲ್ಲಪ್ಪ ಭಾಗವಹಿಸಿದ್ದರು.

‘ಅರಳಿಬೆಂಚಿ ಗ್ರಾಮದಲ್ಲಿ ಲೋ ವೋಲ್ಟೇಜ್ ನಿಂದ ವಿದ್ಯುತ್ ಸಮಸ್ಯೆಯಾಗುತ್ತಿದೆ. ಪ್ರಸ್ತುತ 63 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕವಿದ್ದು, ಬಲ್ಬ್ ಗಳು ದೀಪದ ಬತ್ತಿಯಂತೆ ಬೆಳಕು ನೀಡುತ್ತಿದೆ. ಮಿಕ್ಸರ್, ಫ್ಯಾನ್, ರೆಫ್ರಿಜಿರೇಟರ್ ಸರಿಯಾಗಿ ವರ್ಕ್ ಆಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಅನೇಕ ಹೋರಾಟ ಮಾಡಿದ್ದೇವೆ’ ಎಂದು ತಿಳಿಸಿದರು.

ಕಳೆದ ಸೆಪ್ಟೆಂಬರ್ 9 ರಂದು ಜೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಇದರ ಪರಿಣಾಮ ಹೆಚ್ಚುವರಿಯಾಗಿ 100 ಕೆವಿ ವಿದ್ಯುತ್ ಪರಿವರ್ತಕ ಅಳವಡಿಸಲು ಸೆಪ್ಟಂಬರ್ 27 ಅಂದಾಜು ಪಟ್ಟಿ ಸಿದ್ದಪಡಿಸಲಾಗಿದೆ. ಅಕ್ಟೋಬರ್ 27 ಅನುಮೋದನೆ ನೀಡಿ, ಅಕ್ಟೋಬರ್ 5 ರಂದು ನೂತನ ವಿದ್ಯುತ್ ಪರಿವರ್ತಕ ಅಳವಿಡಿಸಲು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಇಲಾಖೆಯ ಇಇ ಚಂದ್ರಶೇಖರ ದೇಸಾಯಿ ಆದೇಶ ಮಾಡಿದರೂ ನೂತನ ಟಿಸಿ ಅಳವಡಿಸಿಲ್ಲ’ ಎಂದು ದೂರಿದರು.

ಇದಕ್ಕೆ ಸ್ಪಂದಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಟರಾಜ ಮಾತನಾಡಿ, ‘100 ಕೆವಿ ಟಿಸಿ ಅಳವಡಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಅನಿಯಮಿತ ವಿದ್ಯುತ್ ಪೂರೈಕೆ–ಸಮಸ್ಯೆ ಬಗೆಹರಿಸಿ: ‘ನಮ್ಮ ಬಡಾವಣೆಯಲ್ಲಿ ಪ್ರತಿನಿತ್ಯ 2ರಿಂದ 3 ತಾಸು ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಈ ಸಮಸ್ಯೆಗೆ ಶಾಶ್ವರ ಪರಿಹಾರ ಕಂಡುಕೊಳ್ಳಬೇಕು’ ಎಂದು ಆಶ್ರಯ ಕಾಲೊನಿಯ ನಿವಾಸಿ ಎನ್ ಮಹಾವೀರ ಹಾಗೂ ಎಲ್ ಬಿಎಸ್ ನಗರದ ನಿವಾಸಿ ಅಬ್ಬಾಸ್ ಅಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್ ವಿನಯಕುಮಾರ ‘ ಬಡಾವಣೆಗಳಲ್ಲಿ ಅಕ್ರಮ ವಿದ್ಯುತ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಅನೇಕರು ಅಕ್ರಮವಾಗಿ ವಿದ್ಯುತ್ ಬಳಸಿಕೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳ ಬೆಂಬಲದೊಂದಿಗೆ ಕ್ರಮ ಕೈಗೊಳ್ಳಲಾಗುವುದು. ಬಳಕೆದಾರರ ಸಂಖ್ಯೆ ಹೆಚ್ಚಾದ ಕಾರಣ ಪದೇಪದೇ ವಿದ್ಯುತ್ ಪರಿವರ್ತಕ ಸುಟ್ಟು ಹೋಗುತ್ತಿವೆ. ಇದಕ್ಕೆ ಪರಿಹಾರವಾಗಿ ಮತ್ತೊಂದು ಸಬ್ ಸ್ಟೇಶನ್ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.