ರಾಮನಗರ: ನಗರದ ಮುಖ್ಯರಸ್ತೆಯಲ್ಲಿರುವ ಹಜರತ್ ಪೀರಾನ್ ಷಾ ವಲಿ ದರ್ಗಾದ ಗಂಧ ಕಾರ್ಯಕ್ರಮದ ಅಂಗವಾಗಿ, ವಿತರಿಸಿದ ಪ್ರಸಾದ ಸೇವಿಸಿದ ಸುಮಾರು 40 ಮಂದಿ ಅಸ್ವಸ್ಥರಾಗಿದ್ದಾರೆ. ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಪ್ರಸಾದ ಸೇವಿಸಿ ಅಸ್ವಸ್ಥರಾದವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗುತ್ತಿದೆ.

ಯಾರಬ್ ನಗರ, ಟಿಪ್ಪು ನಗರದಲ್ಲಿ ಗಂಧ ಕಾರ್ಯಕ್ರಮದ ಅಂಗವಾಗಿ ಪ್ರಸಾದ ವಿತರಿಸಲಾಗಿತ್ತು. ಅದನ್ನು ಸೇವಿಸಿದ ಕೆಲವೇ ಹೊತ್ತಿನಲ್ಲಿ ಜನರಿಗೆ ವಾಂತಿ ಮತ್ತು ಬೇಧಿ ಮಾಡಿಕೊಳ್ಳತೊಡಗಿದರು. ತಕ್ಷಣ ಸ್ಥಳೀಯರು ಅವರನ್ನು ವಾಹನಗಳಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಪ್ರಸಾದ ವಿತರಣೆ ನಡೆದ ಸ್ಥಳಕ್ಕೆ ಪೊಲೀಸರು ಹಾಗೂ ಆರೋಗ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರಿಗೆ ವಿತರಣೆ ಮಾಡಿದ ಆಹಾರವನ್ನು ವಶಕ್ಕೆ ಪಡೆದು ಪರೀಕ್ಷಿಸುತ್ತಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.